
ಪ್ರಜಾವಾಣಿ ವಾರ್ತೆ
ಗೋಕಾಕ: ನೆರೆಯ ಮಹಾರಾಷ್ಟ್ರದ ಅಕ್ಕಲಕೋಟದಿಂದ ಸಂಜಯ ಕುಲಕರ್ಣಿ ಅವರ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ್ದ ಸ್ವಾಮಿ ಸಮರ್ಥ ಮಹಾರಾಜರ ಪಲ್ಲಕ್ಕಿಗೆ ಭಕ್ತರು ಸ್ವಾಗತಿಸಿದರು.
ಹೊಸಪೇಟ ಗಲ್ಲಿಯ ಚವ್ಹಾಣ ಕುಟುಂಬದ ವಿಶಾಲವಾದ ಪಟಂಗಳದಲ್ಲಿ ಪಲ್ಲಕ್ಕಿ ಸೇವೆಗೆ ಅನುವು ಮಾಡಿಕೊಡಲಾಗಿತ್ತು. ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಮಹಾರಾಜರ ಅನುಯಾಯಿ ಭಕ್ತರು, ಶ್ರದ್ಧೆಯಿಂದ ಭಕ್ತಿ ಸಮರ್ಪಿಸಿದರು.
ಮಹಾರಾಜರ ಅನುಯಾಯಿಗಳಾದ ಅಂಬಿರಾವ ಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ, ಹುಣಚ್ಯಾಳಿ, ಗೋಕಾಕ ಗ್ರಾಮದೇವತೆ ಜಾತ್ರಾ ಕಮೀಟಿಯ ಪ್ರಭಾಕರ ಚವ್ಹಾಣ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಸ್ವಾಮಿ ಸಮರ್ಥ ಅಕ್ಕಲಕೋಟ ಮಹಾರಾಜರ ಅನ್ನ ಛತ್ರ ಮಂಡಳಿಯ ವ್ಯವಸ್ಥಾಪಕ ಮಂಡಳಿಯ ಅಮೋಲರಾಜೇ ಭೋಸಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.