ADVERTISEMENT

ಬೆಳಗಾವಿ: ಚಂಡಮಾರುತ ಪರಿಣಾಮ; ಹವಾಮಾನ ವೈಪರೀತ್ಯ

​ಪ್ರಜಾವಾಣಿ ವಾರ್ತೆ
Published 15 ಮೇ 2021, 12:16 IST
Last Updated 15 ಮೇ 2021, 12:16 IST

ಬೆಳಗಾವಿ: ‘ತೌಕ್ತೆ’ ಚಂಡಮಾರುತದ ಪರಿಣಾಮ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಹವಾಮಾನ ವೈಪರೀತ್ಯ ಕಂಡುಬಂತು. ಜೋರು ಗಾಳಿ ಬೀಸುತ್ತಿತ್ತು. ದಿಢೀರನೆ ಮೋಡದ ವಾತಾವರಣ ನಿರ್ಮಾಣವಾಗುತ್ತಿತ್ತು. ಒಮ್ಮೊಮ್ಮೆ ಬಿರು ಬಿಸಿಲು ಕೂಡ ಇರುತ್ತಿತ್ತು. ಅಲ್ಲಲ್ಲಿ ಮಳೆಯೂ ಸುರಿಯಿತು.

ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಆಗಾಗ ಜೋರು ಗಾಳಿ ಸಹಿತ ಮಳೆಯಾಯಿತು. ರಾಮದುರ್ಗ, ಸವದತ್ತಿ, ಕಿತ್ತೂರು, ಗೋಕಾಕ, ಹಾರೂಗೇರಿ, ಖಾನಾಪುರ, ರಾಯಬಾಗ ಪ್ರದೇಶದಲ್ಲೂ ಮಳೆ ಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT