ADVERTISEMENT

ತೆಲಸಂಗ: ವಿಶ್ವಕರ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 10:58 IST
Last Updated 17 ಸೆಪ್ಟೆಂಬರ್ 2019, 10:58 IST
ತೆಲಸಂಗದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಅಂಗವಾಗಿ ಅವರ ಫೋಟೊಗೆ ವೀರೇಶ್ವರ ದೇವರು ಪೂಜೆ ಸಲ್ಲಿಸಿದರು
ತೆಲಸಂಗದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಅಂಗವಾಗಿ ಅವರ ಫೋಟೊಗೆ ವೀರೇಶ್ವರ ದೇವರು ಪೂಜೆ ಸಲ್ಲಿಸಿದರು   

ತೆಲಸಂಗ: ‘ವಿಶ್ವಕರ್ಮರ ಆದರ್ಶಗಳನ್ನು ಅಳವಡಿಸಿಕೊಂಡು, ಮಾನವೀಯ ಮೌಲ್ಯಗಳೊಂದಿಗೆ ಜೀವನ ನಡೆಸಬೇಕು’ ಎಂದು ಇಲ್ಲಿನ ಹಿರೇಮಠದ ವೀರೇಶ್ವರ ದೇವರು ಸಲಹೆ ನೀಡಿದರು.

ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಕರ್ಮ ಜಯಂತ್ಯುತ್ಸವ ನಿಮಿತ್ತ ಅವರ ಫೋಟೊಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬುದ್ಧಿವಂತಿಕೆ, ದೂರದೃಷ್ಟಿ, ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾದ ಈ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕಿಯ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಬಲರಾಗಬೇಕು’ ಎಂದು ಆಶಿಸಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಹಿರಿಯರಾದ ಈರಣ್ಣ ಕುಮಠಳ್ಳಿ, ಅರವಿಂದ ಉಂಡೋಡಿ, ಗುರುರಾಜ ಕುಂಬಾರ, ಡಾ.ಎಸ್.ಐ. ಇಂಚಗೇರಿ, ಡಾ.ಬಿ.ಎಸ್. ಕಾಮನ್, ಮಲ್ಲಪ್ಪ ಗಂಗಾಧರ, ವಿಶ್ವಕರ್ಮ ಸಮಾಜದ ರಾಜು ಪರ್ನಾಕರ, ಮುದಕಪ್ಪ ಬಡಿಗೇರ, ಬಾಲಕೃಷ್ಣ ಬಡಿಗೇರ, ವಿಜಯ ಪತ್ತಾರ, ಗಣಪತಿ ಪತ್ತಾರ, ಸಿದ್ದಲಿಂಗ ಮಾದರ, ಜಗದೀಶ ಮಠದ, ಸಂಗಮೇಶ ಬಡಿಗೇರ, ವೀರೇಶ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.