ADVERTISEMENT

ಖಾನಾಪುರ | ಸಿದ್ಧಾರೂಢ ಶ್ರೀ ತೆಪ್ಪೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 16:00 IST
Last Updated 4 ಸೆಪ್ಟೆಂಬರ್ 2024, 16:00 IST
ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಕೆರೆಯಲ್ಲಿ ಆರೂಢ ಮಠದಿಂದ ನಡೆಯುವ ತೆಪ್ಪೋತ್ಸವದ ಸಿದ್ಧತೆಗಳನ್ನು ಶಿವಪುತ್ರ ಶ್ರೀ ಪರಿಶೀಲಿಸಿದರು
ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಕೆರೆಯಲ್ಲಿ ಆರೂಢ ಮಠದಿಂದ ನಡೆಯುವ ತೆಪ್ಪೋತ್ಸವದ ಸಿದ್ಧತೆಗಳನ್ನು ಶಿವಪುತ್ರ ಶ್ರೀ ಪರಿಶೀಲಿಸಿದರು   

ಖಾನಾಪುರ: ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಆರೂಢ ಮಠದ ವತಿಯಿಂದ ಗ್ರಾಮದ ಕೆರೆಯಲ್ಲಿ ಸೆ.5ರಂದು ಸಂಜೆ 5 ಗಂಟೆಗೆ ಸಿದ್ಧಾರೂಢ ಸ್ವಾಮಿ ತೆಪ್ಪೋತ್ಸವ ಆಯೋಜಿಸಲಾಗಿದೆ.

ಇದೇ ಮೊದಲ ಬಾರಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಾದರಿಯಲ್ಲಿ ಈ ತೆಪ್ಪೋತ್ಸವ ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಶಿವಪುತ್ರ ಶ್ರೀಗಳು ಮಾಹಿತಿ ನೀಡಿದರು.

ಗುರುವಾರ ಇಡೀ ದಿನ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಸುಕಿನ 5 ಗಂಟೆಗೆ ಕೋಟಿ ಬಿಲ್ವಾರ್ಚನೆ, 10 ಗಂಟೆಗೆ ಜಲರಥೋತ್ಸವ ಲೋಕಾರ್ಪಣೆ ಮತ್ತು ಮಧ್ಯಾಹ್ನ ವೇದಾಂತ ಪರಿಷತ್ ಜರುಗಲಿದೆ. ಧಾರವಾಡದ ಅಯ್ಯಪ್ಪಸ್ವಾಮಿ ದೇವಾಲಯದ ಧರ್ಮದರ್ಶಿ ರಮೇಶ ಪಾತ್ರೋಟ, ಶಾಸಕ ವಿಠ್ಠಲ ಹಲಗೇಕರ, ಹುಬ್ಬಳ್ಳಿ ಸಿದ್ಧಾರೂಢ ಮಠದ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿ ಶಾಮಾನಂದ ಪೂಜೇರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಗ್ರಾಮದ ಕೆರೆಯ ಆವರಣದಲ್ಲಿ ಮಠದಿಂದ ಬುಧವಾರ ತೆಪ್ಪೋತ್ಸವವನ್ನು ಪ್ರಾಯೋಗಿಕವಾಗಿ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.