ಗೋಕಾಕ: ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ರಾಯಲ್ ಚಾಲೆಂಜರ್ಸ್ ಗೋಕಾಕ ತಂಡ ಪ್ರಥಮ ಸ್ಥಾನ ಪಡೆಯಿತು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ನೀಡಿದ ₹ 75 ಸಾವಿರ ನಗದು ಬಹುಮಾನ ಗೋಕಾಕ್ ತಂಡಕ್ಕೆ ನೀಡಲಾಯಿತು. ರನ್ನರ್ಸ್ ಅಪ್ ಆಗಿ ಗೋಕಾಕ ರಾಯಲ್ಸ್ ತಂಡ ₹ 45 ಸಾವಿರ ನಗದು ಬಹುಮಾನ ಪಡೆಯಿತು. ಲಖನ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಸದಾನಂದ ಕಲಾಲ, ಉದ್ಯಮಿ ಕಿಶೋರ್ ಭಟ್ (ಶೆಟ್ಟಿ), ಇಸ್ಮಾಯಿಲ್ ಗೋಕಾಕ ಬಹುಮಾನ ವಿತರಿಸಿದರು.
ಪಂದ್ಯಾವಳಿ ಆಯೋಜಕ ಸಂತೋಷ ನಾಯ್ಕ, ರಜಾಕ್ ತಳವಾರ, ಯುಸೂಫ್ ಗೋಕಾಕ, ಸುನೀಲ ಭಗತ, ಆನಂದ ಕೊಣ್ಣೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.