ADVERTISEMENT

ಕಳ್ಳತನ, ಮಟ್ಕಾ ಪ್ರಕರಣ: ಹಲವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 3:08 IST
Last Updated 13 ಫೆಬ್ರುವರಿ 2026, 3:08 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಳಗಾವಿ: ಬೆಳಗಾವಿ ನಗರ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಹಾಗೂ ವಾಹನ ಕಳ್ಳತನ ಪ್ರಕರಣಕ್ಕೆ ಇಬ್ಬರು ಆರೋಪಿಗಳನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 

ತಾಲ್ಲೂಕಿನ ಕಂಗ್ರಾಳಿ ಕೆ.ಎಚ್‌ನ ರಜತ ಶಿವಣಗೇಕರ, ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿಯ ವಿಠ್ಠಲ ಆರೇರ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ADVERTISEMENT

 ****

ಮಟ್ಕಾ: ಇಬ್ಬರ ಬಂಧನ

ಬೆಳಗಾವಿ: ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಶಹಾಪುರದ ಕೋರೆ ಗಲ್ಲಿ ಕ್ರಾಸ್‌ ಬಳಿ ಭಾರತ ನಗರದ ಶುಭಂ ಕನ್ನೂಕಲೆ ಎಂಬಾತನನ್ನು ಬಂಧಿಸಿದ್ದಾರೆ. ವಡಗಾವಿಯ ಚಾವಡಿ ಗಲ್ಲಿ ಕ್ರಾಸ್‌ ಬಳಿ ಹಳೇ ಬೆಳಗಾವಿಯ ಲಕ್ಷ್ಮಿ ಗಲ್ಲಿಯ ಮಿಲಿಂದ ಸುತಾರ ಎಂಬಾತನನ್ನು ಬಂಧಿಸಿ  ₹11,010 ನಗದು ವಶಕ್ಕೆ ಪಡೆಯಲಾಗಿದೆ.

****

ಗಾಂಜಾ ಸೇವನೆ: ಇಬ್ಬರ ಬಂಧನ

ಬೆಳಗಾವಿ: ಇಲ್ಲಿನ ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡದ ಬಳಿ ಮಂಗಳವಾರ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅನಗೋಳದ ರಘುನಾಥ ಪೇಟೆಯ ವಿರಾಜ ಕಂಗ್ರಾಳಕರ, ಬಾಂಧುರ ಗಲ್ಲಿಯ ಸುನೀಲ ಅಸಲಕರ ಬಂಧಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.