ADVERTISEMENT

‘ಕೋಳಿ ಮಾಂಸಕ್ಕೂ, ಕೊರೊನಾ ವೈರಸ್‌ಗೂ ಸಂಬಂಧವಿಲ್ಲ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:32 IST
Last Updated 23 ಫೆಬ್ರುವರಿ 2020, 13:32 IST

ಬೆಳಗಾವಿ: ‘ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ಗೂ, ಕೋಳಿ ಮಾಂಸಕ್ಕೂ ಸಂಬಂಧವಿಲ್ಲ. ಈ ವೈರಸ್‌ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆಯೇ ಹೊರತು ಪಕ್ಷಿಗಳಿಂದಲ್ಲ’ ಎಂದು ಕ್ವಾಲಿಟಿ ಹೌಸ್‌ನ ಬೆಲ್‌ಚಿಕ್‌ ಕಂಪನಿ ನಿರ್ದೇಶಕ ಸಂಜೀವ ದೇಶಪಾಂಡೆ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಇದುವರೆಗೆ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಕೋಳಿ ಮಾಂಸ ತಿಂದರೆ ಕೊರೊನಾ ಹರಡುತ್ತದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಮೂಲಕ ಜನರಲ್ಲಿ ಭೀತಿ ಉಂಟು ಮಾಡಲಾಗುತ್ತಿದೆ. ಇದರಿಂದ ಕುಕ್ಕುಟೋದ್ಯಮಕ್ಕೆ ಸಂಕಷ್ಟ ಎದುರಾಗಿದೆ. ಜನರು ವದಂತಿ ನಂಬಿದ್ದರಿಂದಾಗಿ ಕೋಳಿ ಮಾಂಸದ ಬೆಲೆ ಕಡಿಮೆಯಾಗಿದೆ. ಆದರೆ, ಫೀಡ್ಸ್‌ ಬೆಲೆ ಏರಿಕೆಯಾಗಿದೆ’ ಎಂದು ತಿಳಿಸಿದರು.

‘ಕೋಳಿ ಮಾಂಸ ಸೇವನೆಗೆ ಯಾವುದೇ ತೊಂದರೆ ಇಲ್ಲ’ ಎಂದರು.

ADVERTISEMENT

ತಜ್ಞರಾದ ಮಹೇಂದ್ರ ಚೌಧರಿ, ಸುಬ್ರಹ್ಮಣ್ಯ ಭಟ್, ಉದ್ಯಮಿಗಳಾದ ಅಜಿತ ಲೋಕುರ, ಅಜಯ ಮಾನೆ ಮತ್ತು ಮಧುಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.