ADVERTISEMENT

ಬೆಳಗಾವಿ | ವಿದ್ಯುತ್ ಅವಘಡ: ಹೆಸ್ಕಾಂ, ಗುತ್ತಿಗೆದಾರ, ಮಾಲೀಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 9:39 IST
Last Updated 12 ಆಗಸ್ಟ್ 2023, 9:39 IST
ಎಸ್‌.ಎನ್‌. ಸಿದ್ದರಾಮಪ್ಪ
ಎಸ್‌.ಎನ್‌. ಸಿದ್ದರಾಮಪ್ಪ   

ಬೆಳಗಾವಿ: ‘ಶಾಹೂ ನಗರದ ಮೂರನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ವಿದ್ಯುತ್‌ ತಗುಲಿ ಮೂವರು ಸಾವಿಗೀಡಾಗಿದ್ದು, ಇದಕ್ಕೆ ಹೆಸ್ಕಾಂ ಅಧಿಕಾರಿಗಳು, ಮನೆಯ ಮಾಲೀಕರು, ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಸ್ಪಷ್ಟವಾಗಿದೆ. ಮೂವರ ಮೇಲೂ ‘304’ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್ ಎಸ್‌.ಎನ್‌. ಸಿದ್ದರಾಮಪ್ಪ ಹೇಳಿದರು.

ಇದನ್ನೂ ಓದಿ: ಬೆಳಗಾವಿ | ವಿದ್ಯುತ್ ಅವಘಡ: ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ: ಲಕ್ಷ್ಮೀ ಹೆಬ್ಬಾಳಕರ

ಶವಗಳನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಸ್ಥಳ ಪರಿಶೀಲನೆ ನಡೆಸಿದ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ‘ವಿದ್ಯುತ್‌ ಸಂಪರ್ಕ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಗುತ್ತಿಗೆದಾರ ಕೈಗೊಂಡಿಲ್ಲ. ಮೇಲಾಗಿ, ಈ ಮನೆಯ ಮಾಲೀಕರಾದ ಸರೋಜಿನಿ ನರಸಿಂಗನವರ ಎನ್ನುವವರು ಬೆಂಗಳೂರಿನಲ್ಲಿ ಇದ್ದಾರೆ. ಈ ಮೂವರನ್ನೂ ದೋಷಿ ಮಾಡಲಾಗುವುದು’ ಎಂದರು.

ADVERTISEMENT

‘ಈ ಸಾವಿನ ತನಿಖೆ ಮುಗಿದ ಬಳಿಕ ಕುಟುಂಬದವರಿಗೆ ಯಾವ ರೀತಿ ಪರಿಹಾರ ದೊರಕಿಸಲು ಸಾಧ್ಯ ಎಂಬುದರ ಕುರಿತೂ ಯೋಚಿಸಲಾಗುವುದು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.