ರಾಯಬಾಗ: ಆಪರೇಷನ್ ಸಿಂಧೂರ ಯಶಸ್ಸು, ಯೋಧ ನಮನ ಹಾಗೂ ರಾಷ್ಟ್ರ ರಕ್ಷಣೆಗಾಗಿ ನಗರದಲ್ಲಿ ಶನಿವಾರ ಬಿಜೆಪಿ ನೇತೃತ್ವದಲ್ಲಿ ತಿರಂಗಾ ಯಾತ್ರೆ ಸಂಭ್ರಮದಿಂದ ನಡೆಯಿತು. ಪಟ್ಟಣದ ಅಂಬಾಭವಾನಿ ಮಂದಿರದಿಂದ ಅಭಾಜಿ ವೃತ್ತದವರೆಗೆ ಯಾತ್ರೆ ಸಾಗಿ ಬಂದಿತು.
ಶಾಸಕ ಡಿ.ಎಂ.ಐಹೊಳೆ ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ, ಮುಗ್ಧ ಜನರನ್ನು ಹತ್ಯೆ ಮಾಡಿ, ಭಾರತದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿತ್ತು. ಆದರೆ, ‘ಭಾರತ ಮಾತೆಯ ಸೇವಕ’ನಾಗಿ ಮೋದಿ ಇಲ್ಲಿ ಧೈರ್ಯದಿಂದ ಕೆಲಸ ನಿರ್ವಹಿಸಿದ್ದಾರೆ ಎಂದರು.
'ಎಲ್ಲೆಡೆ ಭಾರತ ಮಾತಾಕಿ ಜೈ', 'ವೀರ ಜವಾನ ಅಮರ ರಹೇ'ಎಂಬ ಘೋಷಣೆಗಳು ಮೊಳಗಿದವು.ಎಲ್ಲೆಡೆ ತಿರಂಗಾ ಧ್ವಜಗಳು ರಾರಾಜಿದವು.
ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೊಳ, ಶಿವಶಂಕರ ಸ್ವಾಮೀಜಿ, ವೀರಭದ್ರ ಸ್ವಾಮೀಜಿ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಪೃಥ್ವಿರಾಜ ಜಾಧವ, ಭರತೇಶ ಬನವಣೆ, ಮಹೇಶ ಭಾತೆ, ರಾಜು ದೇಶಪಾಂಡೆ, ಎಲ್.ಬಿ.ಚೌಗಲಾ, ವಿ.ಎಸ್.ಪೂಜಾರಿ, ಜಯದೀಪ ದೇಸಾಯಿ, ಶಿವಾನಂದ ಬಂತೆ, ಅಪ್ಪು ಪವಾರ, ಅನೀಲ ಶೆಟ್ಟಿ, ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಆನಂದ ಹೊಸಮನಿ ಹಾಗೂ ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.