ADVERTISEMENT

₹25.93 ಲಕ್ಷ ಮೌಲ್ಯದ ರಸಗೊಬ್ಬರ ವಶ, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:58 IST
Last Updated 3 ಜೂನ್ 2022, 19:58 IST
   

ಬೆಳಗಾವಿ: ಅಂದಾಜು ₹25.93 ಲಕ್ಷ ಮೌಲ್ಯದ ರಸಗೊಬ್ಬರ ಕಳವು ಮಾಡಿದ ಐವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಕಳವಾದ ಮಾಲು ವಶಕ್ಕೆ ಪಡೆಯಲಾಗಿದೆ.

ಹಲಗಿಮರಡಿಯ ನಾಗರಾಜ ಈರಣ್ಣ ಪಠಾತ, ಲಕ್ಕೆಬೈಲ್‌ದ ಪಂಡಿತ ಕಲ್ಲಪ್ಪ ಸನದಿ, ಮಂಜುನಾಥ ಸೋಮಪ್ಪ ಹಮ್ಮಣ್ಣವರ, ಹೊಸ ವಂಟಮೂರಿಯ ವಸೀಮ್ ಇಸ್ಮಾಯಿಲ್ ಮಕಾಂದಾರ, ಹುದಲಿಯ ಗಜಬರಅಲಿ ಗೌಸಮೊದ್ದಿನ್‌ ಜಿಡ್ಡಿಮನಿ ಬಂಧಿತರು.

ಬಂಧಿತರಿಂದ ಡಿ.ಎ.ಪಿ ರಸಗೊಬ್ಬರದ 810 ಚೀಲಗಳು, ಕಳ್ಳತನ ಮಾಡಲು ಉಪಯೋಗಿಸಿದ ಎರಡು ಟ್ರಕ್‌ ವಶಕ್ಕೆ ಪಡೆಯಲಾಗಿದೆ.

ADVERTISEMENT

ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ದೇಸೂರ ರೈಲ್ವೆ ಸ್ಟೇಷನ್‌ ಹತ್ತಿರದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ ಈ ಗೊಬ್ಬರದ ಮೂಟೆಗಳನ್ನು ಮೇ 23ರಂದು ಕಳವು ಮಾಡಲಾಗಿತ್ತು. ಶಿವಾಜಿ ಬಾಳಾರಾಮ ಆನಂದಾಚೆ ಎನ್ನುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ಶ್ರೀನಿವಾಸ ಹಾಂಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.