ADVERTISEMENT

ಬೆಳಗಾವಿ: ಮರ ಬಿದ್ದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 15:00 IST
Last Updated 9 ಜೂನ್ 2024, 15:00 IST
<div class="paragraphs"><p>ಸೋಮನಾಥ(ಎಡ), ವಿಠ್ಠಲ(ಬಲ)</p></div>

ಸೋಮನಾಥ(ಎಡ), ವಿಠ್ಠಲ(ಬಲ)

   

ಬೆಳಗಾವಿ: ಸತತ ಮಳೆಯಿಂದಾಗಿ ಮರವೊಂದು ಬೈಕ್‌ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಬೆಳಗುಂದಿ ಬಳಿ ಬಿಜಗರ್ಣಿ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.

ಕರ್ಲೆ ಗ್ರಾಮದ ಸೋಮನಾಥ ಮುಚ್ಚಂಡಿಕರ(21), ವಿಠ್ಠಲ ತಳವಾರ(16) ಮೃತರು.

ADVERTISEMENT

‘ಈ ಬೈಕ್‌ ಮೇಲೆ ಮೂವರು ಸಂಚರಿಸುತ್ತಿದ್ದರು. ಈ ಪೈಕಿ ಸೋಮನಾಥ ಸ್ಥಳದಲ್ಲೇ ಮೃತಪಟ್ಟರೆ, ವಿಠ್ಠಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಸ್ವಪ್ನಿಲ್‌ ದೇಸಾಯಿ(17) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸೇರಿಕೊಂಡು ಕರ್ಲೆಯಿಂದ ಉಚಗಾವಿಗೆ ಹೋಗುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.