ADVERTISEMENT

‘ರಾಮತೀರ್ಥನಗರದಲ್ಲಿ ಒಳಚರಂಡಿ ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 13:34 IST
Last Updated 12 ಅಕ್ಟೋಬರ್ 2021, 13:34 IST
ಬೆಳಗವಿಯ ರಾಮತೀರ್ಥನಗರ ಸ್ನೇಹ ಸಮಾಜ ಸೇವಾ ಸಂಘದವರು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರನ್ನು ಸೋಮವಾರ ಸನ್ಮಾನಿಸಿದರು
ಬೆಳಗವಿಯ ರಾಮತೀರ್ಥನಗರ ಸ್ನೇಹ ಸಮಾಜ ಸೇವಾ ಸಂಘದವರು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರನ್ನು ಸೋಮವಾರ ಸನ್ಮಾನಿಸಿದರು   

ಬೆಳಗಾವಿ: ‘ರಾಮತೀರ್ಥ ನಗರದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಸದ್ಯದಲ್ಲೇ ಕಾರ್ಯಾರಂಭ ಆಗಲಿದೆ’ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಘೂಳಪ್ಪ ಹೊಸಮನಿ ತಿಳಿಸಿದರು.

ಇಲ್ಲಿನ ರಾಮತೀರ್ಥನಗರ ಸ್ನೇಹ ಸಮಾಜ ಸೇವಾ ಸಂಘದಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಹೊರವಲಯದಲ್ಲಿರುವ ಈ ಬಡಾವಣೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವಂತೆ ಎಲ್ಲ ಸೌಲಭ್ಯಗಳುಳ್ಳ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕೆ ಎಲ್ಲ ಶಾಸಕರು ಹಾಗೂ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ’ ಎಂದರು.

ADVERTISEMENT

ವಿಜ್ಞಾನಿ ವಿ.ಎಚ್. ಮಹಾರೆಡ್ಡಿ, ‘ಅಧ್ಯಯನ ಕೇಂದ್ರಕ್ಕೆ ಪುಸ್ತಕಗಳನ್ನು ದೇಣಿಗೆ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಸ್ನೇಹ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಪದಾಧಿಕಾರಿಗಳಾದ ಡಿ.ಎಂ. ಟೊಣ್ಣೆ, ಮಹೇಶ ಮಾವಿನಕಟ್ಟಿ, ಮಹೇಶ ಚಿಟಗಿ, ಬಿ.ಬಿ. ಕಮತೆ, ಮಲ್ಹಾರ ದೀಕ್ಷಿತ, ಸಿ.ಎಸ್. ಖನಗಣ್ಣಿ, ನಜೀರ ಅಹಮದ್ ದಳವಾಯಿ, ದುಂಡಪ್ಪ ಉಳ್ಳೇಗಡ್ಡಿ, ಎಸ್.ಎಲ್. ಸನದಿ, ಜಿ.ಐ. ದಳವಾಯಿ, ಉದಯ ಇಡಗಲ್, ಶ್ರೀಶೈಲ ಹಿರೇಮಠ, ಕಲ್ಲಪ್ಪ ಮಜಲಟ್ಟಿ, ಮನೋಹರ ಕಾಜಗಾರ ಇದ್ದರು.

ಪ್ರೊ.ಎ.ಕೆ. ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಎಸ್.ಸಿ. ಕಮತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.