ಮದ್ಲೂರ: ‘ಹಳ್ಳಿಗಳಲ್ಲಿ ಗ್ರಂಥಾಲಯ ಇರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಗ್ರಾಮೀಣ ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಹಕಾರಿ ಆಗಲಿದೆ’ ಎಂದು ಪಿಡಿಒ ಎಸ್.ಪಿ. ರಾಘವೇಂದ್ರ ಕುಮಾರ್ ಹೇಳಿದರು.
ಮದ್ಲೂರ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಅರಿವು ಕೇಂದ್ರ ಗ್ರಂಥಾಲಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಮಣ ಹೊಟ್ಟೆನ್ನವರ ಸರಸ್ವತಿ ಫೋಟೊಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಉಪಾಧ್ಯಕ್ಷ ಮಹದೇವಿ ಬಾರ್ಕಿ, ಸದಸ್ಯರಾದ ಸೊಮಪ್ಪ ಕಲ್ಲೋಳಿ, ಕರಿಯಪ್ಪ ಪೂಜೇರ, ಪ್ರಕಾಶ ಕಲ್ಲೇದ, ಅಶೋಕ ಯರಝರ್ವಿ, ಸುರೇಶ ಸಾವಳಿಗಿ, ಪಂಡಲೀಕ ಉಪ್ಪಾರ, ಲಕ್ಷ್ಮಿ ಹೂಟ್ಟೆನ್ನವರ, ದೂಡ್ಡವ್ವ ನಾಗನೂರು, ಅನಿತಾ ಸುಣಗಾರ, ಶಿವಮ್ಮ ಸೂಪ್ಟಡ್ಲ, ಕಸ್ತೂರಿ ಬೆನಕಟ್ಟಿ, ಸಿದ್ಧಾರೂಢ ಬಿಲಕಂಚಿ, ಬಸವರಾಜ ಪೂಜಾರ, ಸುರೇಶ ಹೊಟ್ಟಿ, ದ್ಯಾಮಪ್ಪ ಕುರಿ, ಮಾಯಪ್ಪ ಚೂರಿ, ವಿಠ್ಠಲ ಪಚ್ಚಿ, ಶೂಬಾನಿ ದೊಡ್ಡಮನಿ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.