ADVERTISEMENT

ನಿಸ್ವಾರ್ಥ ಸೇವೆ ಭಗವಂತನಿಗೆ ಪ್ರಿಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 9:08 IST
Last Updated 10 ಫೆಬ್ರುವರಿ 2021, 9:08 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.

ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.

ನಾಗೇಂದ್ರನ ಘನವೆಂಬೆನೆ? ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಗಿತ್ತು.

ADVERTISEMENT

ಅಂತಹ ಪಾರ್ವತಿ ಘನವೆಂಬೆನೆ? ಪರಮೇಶ್ವರನ ಅರ್ಧಾಂಗಿಯಾದಳು.

ಅಂತಹ ಪರಮೇಶ್ವರನ ಘನವೆಂಬೆನೆ? ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.

ಭಗವಂತನ ಇರುವಿಕೆಯ ಕುರಿತಾಗಿ ಅಣ್ಣ ಬಸವಣ್ಣನವರು ಮಾರ್ಮಿಕವಾಗಿ ಹೀಗೆ ಹೇಳಿದ್ದಾರೆ. ಮನುಷ್ಯನು ವಾಸಿಸುತ್ತಿರುವ ಭೂಮಿಯು ಮೂರು ಪಟ್ಟು ನೀರಿನಿಂದ ಆವೃತವಾಗಿದೆ. ಸಮುದ್ರ ವಿಶಾಲವಾಗಿದೆ ಎಂದರೆ ಅದು ಭೂಮಿಯ ಮೇಲಿದೆ. ಎಲ್ಲವನ್ನೂ ಒಳಗೊಂಡಿರುವ ಭೂಮಿಯು ವಿಶಾಲವಾಗಿದೆ ಎಂದರೆ ನಾಗೇಂದ್ರನು ಅದನ್ನು ಹೊತ್ತುಕೊಂಡಿದ್ದಾನೆ.

ನಾಗೇಂದ್ರ ದೊಡ್ಡವನು ಎಂದರೆ ಅವನು ಪಾರ್ವತಿಯ ಕಿರುಬೆರಳಿನ ಉಂಗುರವಾಗಿದ್ದಾನೆ. ಪಾರ್ವತಿಯು ದೊಡ್ಡವಳು ಎನ್ನೋಣವೆಂದರೆ ಪರಮೇಶ್ವರನ ಅರ್ಧಾಂಗಿಯಾಗಿದ್ದಾಳೆ. ಪರಮೇಶ್ವರನು ದೊಡ್ಡವನು ಎಂದು ಕರೆಯೋಣವೆಂದರೆ ಆತನು ಕೂಡಲಸಂಗನ ಶರಣರ ಹೃದಯದೊಳಗೆ ಅಡಗಿದ್ದಾನೆ. ಆದ್ದರಿಂದ ಭಗವಂತನು ಕಾಯಕನಿಷ್ಠ, ಶ್ರದ್ಧೆಯ ಸೇವೆ ಮಾಡುವ ನಿಸ್ವಾರ್ಥ ಶರಣರ ಹೃದಯದೊಳಗೆ ಅಡಗಿದ್ದಾನೆ. ಇದನ್ನು ನಾವು ಅರಿಯಬೇಕು ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.