ADVERTISEMENT

ಕನ್ನಡ ವೈದ್ಯ ಬರಹಗಾರರ ರಾಜ್ಯಮಟ್ಟದ 5ನೇ ಸಮ್ಮೇಳನ: ಆರು ನಿರ್ಣಯಗಳ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 0:29 IST
Last Updated 26 ಆಗಸ್ಟ್ 2024, 0:29 IST

ಬೆಳಗಾವಿ: ಇಲ್ಲಿ ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಕನ್ನಡ ವೈದ್ಯ ಬರಹಗಾರರ ರಾಜ್ಯಮಟ್ಟದ 5ನೇ ಸಮ್ಮೇಳನದಲ್ಲಿ ಭಾನುವಾರ ಆರು ನಿರ್ಣಯಗಳ ಅಂಗೀಕರಿಸಲಾಯಿತು.

‘ಕನ್ನಡ ಸಂಘ ಮತ್ತು ಕನ್ನಡ ಬಳಗಗಳ ಮೂಲಕ ಕನ್ನಡ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ಕ್ರಮ ವಹಿಸಬೇಕು. ವೈದ್ಯರು ರಚಿಸಿದ ಕಥೆಗಳನ್ನು ಆಹ್ವಾನಿಸಿ, ಪ್ರಾತಿನಿಧಿಕ ಕಥಾ ಸಂಕಲನ ಪ್ರಕಟಿಸಬೇಕು. ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿ ಪ್ರಕಟಿಸಲು ಪ್ರಸಾರಾಂಗ ಸ್ಥಾಪಿಸಬೇಕು ಮತ್ತು ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ಪ್ರಸಾರಾಂಗಗಳ ಸಹಕಾರ ಪಡೆಯಬೇಕು. ವೈದ್ಯಕೀಯ ಗ್ರಂಥಾಲಯಗಳಲ್ಲಿ ಕನ್ನಡ ವೈದ್ಯಕೀಯ ಸಾಹಿತ್ಯವೂ ಲಭಿಸಲು ಕ್ರಮ ವಹಿಸಬೇಕು. ಪಠ್ಯ ಪುಸ್ತಕಗಳಲ್ಲಿ ಆರೋಗ್ಯ ಸಾಹಿತ್ಯಕ್ಕೆ ಒತ್ತು ನೀಡಬೇಕು. ಕನ್ನಡದ ಎಲ್ಲ ವೈದ್ಯ ಬರಹಗಾರರ ಮಾಹಿತಿ ದಾಖಲಿಸುವ ಕೆಲಸವಾಗಬೇಕು’ ಎಂಬ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷೆ ಡಾ.ವೀಣಾ ಸುಳ್ಯ ಇವುಗಳನ್ನು ಮಂಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.