ADVERTISEMENT

ಸ್ವಾತಂತ್ರ್ಯೋತ್ಸವ: ಮಾಜಿ ಯೋಧರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:52 IST
Last Updated 15 ಆಗಸ್ಟ್ 2025, 5:52 IST
ಬೆಳಗಾವಿಯ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಮಾಜಿ ಯೋಧರ ಸನ್ಮಾನ ಹಾಗೂ ಔಷಧಿ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು
ಬೆಳಗಾವಿಯ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಮಾಜಿ ಯೋಧರ ಸನ್ಮಾನ ಹಾಗೂ ಔಷಧಿ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು   

ಬೆಳಗಾವಿ: ‘ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮನ್ನು ರಕ್ಷಿಸುವ ಸೈನಿಕರನ್ನು ಹಾಗೂ ಬೆವರು ಸುರಿಸಿ ಅನ್ನ ನೀಡುವ ರೈತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಬಿ. ಶಿರಶ್ಯಾಡ ತಿಳಿಸಿದರು.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ಗುರುವಾರ ಆಯೋಜಿಸಿದ್ದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ ಹಾಗೂ 79 ಔಷಧೀಯ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಯೋಧರಾದ ಕ್ಯಾಪ್ಟನ್ ಮಹಾಂತೇಶ ಓಸಿ, ಸುಬೇದಾರ್ ವಿರೂಪಾಕ್ಷಿ ತಿಳಿಗಂಜಿ, ಸುಬೇದಾರ್‌ಗಳಾದ ಡಿ.ಬಿ ಹಂಜಿ, ನಾಯಕ್ ಸುಬೇದಾರ್ ಜಿ.ವಿ. ಅಡ್ಲಿಮಠ, ಹವಾಲ್ದಾರ್‌ಗಳಾದ ಎಸ್.ವಿ. ಅಡ್ಲಿಮಠ, ಬಸವರಾಜ ಬಾಗಲಕೋಟೆ, ಅಶೋಕಡಪ್ಪ, ಮಹಾಲಿಂಗಪ್ಪ, ಅಣ್ಣಪ್ಪ ಮರಾಠೆ, ಸಿಗ್ನಲ್ ಮ್ಯಾನ್  ರಾಜಶೇಖರ ಮನ್ನಣ್ಣಿ, ನಾಯಕ್ ನರವೇಕರ, ಮೀರಜಕರ, ಅಶೋಕ ಹಡಪದ ಇತರರು ಆಗಮಿಸಿದ್ದರು.

ADVERTISEMENT

ಉಪನ್ಯಾಸಕರಾದ ಅಣ್ಣಪ್ಪ ಮರಾಠೆ, ಜ್ಯೋತಿ ಸಿ. ವಿಭೂತಿ, ನಿರ್ಮಲಾ ನಾಯಕ ಇತರರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.