ಬೆಳಗಾವಿ: ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಲ್ಲಿನ ರಾಣಿ ಚನ್ನಮ್ಮನ ವೃತ್ತದ ಬಳಿ ಇರುವ ಗಣೇಶ ಮಂದಿರದಲ್ಲಿ ಬಿಜೆಪಿ ಮಹಾನಗರ ಮಹಿಳಾ ಘಟಕದವರು ಗುರುವಾರ ಪೂಜೆ ಸಲ್ಲಿಸಿದರು.
ಗಡಿಯಲ್ಲಿ ದೇಶ ಕಾಯುವ ಭಾರತದ ಸೈನಿಕರಿಗೆ ಮತ್ತಷ್ಟು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು. ಭಾರತೀಯ ಸೇನೆ ಪರವಾಗಿ ಜೈಕಾರ ಕೂಗಲಾಯಿತು.
ಉಪಮೇಯರ್ ವಾಣಿ ಜೋಶಿ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಸಂಸದೆ ಮಂಗಲ ಅಂಗಡಿ, ಉಜ್ವಲಾ ಬಡವನಾಚೆ, ಲೀನಾ ಟೋಪಣ್ಣವರ, ಶಿಲ್ಪಾ ಕೆಕರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.