ADVERTISEMENT

ನಿವೃತ್ತ ಸೈನಿಕರಿಗೆ ಆತ್ಮೀಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 15:21 IST
Last Updated 7 ಮಾರ್ಚ್ 2021, 15:21 IST
ತೆಲಸಂಗದಲ್ಲಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದ ಅನಿಲ ಪರಪ್ಪ ಹಡಪದ ಹಾಗೂ ಮಾಳಪ್ಪ ಸವನೂರ ಅವರನ್ನು ನಿವೃತ್ತ ಸೈನಿಕರ ಸಂಘದವರು ಸತ್ಕರಿಸಿ ಬರಮಾಡಿಕೊಂಡರು
ತೆಲಸಂಗದಲ್ಲಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದ ಅನಿಲ ಪರಪ್ಪ ಹಡಪದ ಹಾಗೂ ಮಾಳಪ್ಪ ಸವನೂರ ಅವರನ್ನು ನಿವೃತ್ತ ಸೈನಿಕರ ಸಂಘದವರು ಸತ್ಕರಿಸಿ ಬರಮಾಡಿಕೊಂಡರು   

ತೆಲಸಂಗ: ಸೈನ್ಯದಲ್ಲಿ 24 ವರ್ಷ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದ ಅನಿಲ ಪರಪ್ಪ ಹಡಪದ ಹಾಗೂ ಮಾಳಪ್ಪ ಸವನೂರ ಅವರನ್ನು ನಿವೃತ್ತ ಸೈನಿಕರು ಮತ್ತು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

ಬಸ್ ನಿಲ್ದಾಣದಿಂದ ದ್ವಿಚಕ್ರವಾಹನಗಳ ಮೆರವಣಿಗೆಯಲ್ಲಿ ಅವರನ್ನು ಬರಮಾಡಿಕೊಳ್ಳಲಾಯಿತು.

ಸತ್ಕಾರ ಸ್ವೀಕರಿಸಿದ ಅನಿಲ ಮಾತನಾಡಿ, ‘18 ವರ್ಷ ತುಂಬಿದಾಗ ಸೈನ್ಯ ಸೇರಿದ್ದೆ. ಅಲ್ಲಿ 24 ವರ್ಷ ಕಾರ್ಯನಿರ್ವಹಿಸಿ, ಭಾರತಾಂಬೆಯ ಸೇವೆ ಮಾಡಿದ್ದೇನೆ. ಈಗ, ತಂದೆ– ತಾಯಿ ಸೇವೆ ಮಾಡುತ್ತಾ ಕುಟುಂಬಕ್ಕೆ ಸಮಯ ಕೊಡುತ್ತೇನೆ. ಯುವಕರಿಗೆ ತರಬೇತಿ ನೀಡುವ ಉದ್ದೇಶವಿದೆ’ ಎಂದರು.

ADVERTISEMENT

ನಿವೃತ್ತ ಸೈನಿಕರಾದ ಗಂಗಪ್ಪ ಗಂಗಾಧರ, ಬಸಲಿಂಗಪ್ಪ ರೋಡಗಿ, ಗೇನುಬಾ ನಲವಾಡೆ, ಬಸವರಾಜ ಬಿಜ್ಜರಗಿ, ಮುನ್ನಾಭಾಯ್ ಕರಜಗಿ, ಸುಭಾಸ್ ಖೊಬ್ರಿ, ತುಕಾರಾಮ ಮೋರೆ, ಪಿಂಟು ಮೋರೆ, ಅಮಸಿದ್ದ ಟೋಪಣಗೋಳ, ಗೂಳಪ್ಪ ಬಿಜ್ಜರಗಿ, ರಾಜು ಪರ್ನಾಕರ, ಮಹಾದೇವ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.