ADVERTISEMENT

ಡಿಸಿಸಿ ಬ್ಯಾಂಕ್ ಚುನಾವಣೆ: ಅವಿರೋಧ ಆಯ್ಕೆಗೆ ಪ್ರಯತ್ನ– ಸವದಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 13:49 IST
Last Updated 19 ಅಕ್ಟೋಬರ್ 2020, 13:49 IST
ಅಥಣಿ ತಾಲ್ಲೂಕಿನ ಚಮಕೇರಿ ರಸ್ತೆಯಲ್ಲಿ ಖಾಸಗಿ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಾಲ್ಗೊಂಡರು
ಅಥಣಿ ತಾಲ್ಲೂಕಿನ ಚಮಕೇರಿ ರಸ್ತೆಯಲ್ಲಿ ಖಾಸಗಿ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಾಲ್ಗೊಂಡರು   

ಅಥಣಿ: ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಪ್ರಯತ್ನ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ತಾಲ್ಲೂಕಿನ ಚಮಕೇರಿ ರಸ್ತೆಯಲ್ಲಿ ಖಾಸಗಿ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕ ಉದ್ಘಾಟನೆ ಕಾರ್ಯಕ್ರಮದ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ಆರ್‌ಎಸ್‌ಎಸ್‌ ಉತ್ತರ ಕರ್ನಾಟಕ ಪ್ರಾಂತದ ಸಂಚಾಲಕ ಅರವಿಂದರಾವ್ ದೇಶಪಾಂಡೆ ಅವರು ನಮಗೆ ಮಾರ್ಗದರ್ಶನದ ಜೊತೆಗೆ ಸಲಹೆ ನೀಡಿದ್ದಾರೆ. ಚುನಾವಣೆಯನ್ನು ಒಗ್ಗಟ್ಟಿನಿಂದ ಮಾಡಿ ಮತ್ತು ಎಲ್ಲರೂ ಒಂದೇ ಪಕ್ಷದಲ್ಲಿ ಇರುವುದರಿಂದ ಯಾವುದೇ ವೈಮನಸ್ಸು ಬೇಡ ಎಂಬ ಸೂಚನೆ ಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ಬೆಳಗಾವಿಯಲ್ಲಿ ಮಂಗಳವಾರ (ಅ.20) ಸಭೆ ನಡೆಸಲಿದ್ದೇವೆ’ ಎಂದರು.

ADVERTISEMENT

ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಬುಟಾಳಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಪೂರ, ಗುತ್ತಿಗೆದಾರ ಬಾಹುಸಾಹೇಬ ಜಾಧವ, ಮುಖಂಡರಾದ ಅರುಣ ಯಲಗುದ್ರಿ, ಶಿವರುದ್ರಪ್ಪ ಘೂಳಪ್ಪನವರ, ಐ.ಜಿ. ಬಿರಾದಾರ, ಎ.ಜಿ. ಹಳ್ಳಿ, ರಾಮು ಗಾಡಿವಡ್ಡರ, ಎಸ್.ಎಸ್. ಜಾಬಗೌಡರ, ವಿಜಯಗೌಡ ಪಾಟೀಲ, ವಿನಾಯಕ ದೇಸಾಯಿ, ಆರ್.ಎಂ. ಪಾಟೀಲ, ಸಂಗಪ್ಪ ಮಾಯನಟ್ಟಿ, ರಾಜು ಮರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.