ಐಗಳಿ (ಬೆಳಗಾವಿ ಜಿಲ್ಲೆ): ‘ಸಂಸ್ಕಾರ ಇಲ್ಲದೆ ಹೋದಲ್ಲಿ ಜೀವನ ಶೂನ್ಯವಾಗಲಿದೆ’ ಎಂದು ಕೋಹಳ್ಳಿಯ ಶಂಕರಯ್ಯ ಹಿರೇಮಠ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿಂಧೂರ ವಸತಿಯಲ್ಲಿರುವ ಅಪ್ಪಯ್ಯ ಸ್ವಾಮಿ ದೇವಾಲಯದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮತ್ತು 7ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶ್ರೀಮಂತರಿರಲಿ ಅಥವಾ ಬಡವರಿರಲಿ ಸಂಸ್ಕಾರದಿಂದ ಒಳ್ಳೆಯ ಜೀವನ ಪಡೆದುಕೊಳ್ಳಲು ಸಾಧ್ಯವಿದೆ. ಕಲ್ಲು ಶಿಲ್ಪಿಯಿಂದ ಮೂರ್ತಿಯಾಗಿ ನಂತರ ಅದಕ್ಕೆ ಸಂಸ್ಕಾರ ನೀಡಿದಾಗ ದೇವರಾಗುತ್ತದೆ’ ಎಂದರು.
ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಮಹಾದೇವ ಹಾಲಳ್ಳಿ, ಮಲಗೌಡ ಪಾಟೀಲ ಮಾತನಾಡಿದರು. ಶಿವನಿಂಗ ಅರಟಾಳ, ಅಧ್ಯಕ್ಷ ನರಸಪ್ಪ ಸಿಂಧೂರ, ಶಿಕ್ಷಕ ಸಿದ್ರಾಮ ಸಿಂಧೂರ, ಪೋಸ್ಟ್ ಮಾಸ್ಟರ್ ಎಸ್.ಎಂ. ಮಂಟೂರ, ಶಿಕ್ಷಕ ಸದಾಶಿವ ಬಿಜ್ಜರಗಿ, ಅಣ್ಣಪ್ಪ ಸನದಿ, ಅಪ್ಪಾಸಾಬ ಮಾಳಿ, ಭೀಮಣ್ಣ ಸಿಂದೂರ, ರಾಜು ವಾಘಮೋರೆ, ಈಶ್ವರ ಬಳ್ಳೋಳ್ಳಿ, ಮಚ್ಚೆಂದ್ರ ತೆಲಸಂಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.