ADVERTISEMENT

ನಾಡು–ನುಡಿ ರಕ್ಷಣೆಗೆ ಎಲ್ಲರೂ ಒಂದಾಗಬೇಕು: ಮುಖಂಡ ಸಿದ್ದಪ್ಪ ಮರ‍್ಯಾಯಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 14:17 IST
Last Updated 27 ನವೆಂಬರ್ 2021, 14:17 IST
ನಾಗರಮುನ್ನೋಳಿಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸ್ಥಳೀಯರು ಮೆರವಣಿಗೆ ನಡೆಸಿದರು
ನಾಗರಮುನ್ನೋಳಿಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸ್ಥಳೀಯರು ಮೆರವಣಿಗೆ ನಡೆಸಿದರು   

ನಾಗರಮುನ್ನೋಳಿ: ‘ನಾಡು–ನುಡಿ ರಕ್ಷಣೆಗಾಗಿ ಎಲ್ಲರೂ ಒಗಟ್ಟಾಗಿ ಹೋರಾಟ ಮಾಡಬೇಕು’ ಎಂದು ಮುಖಂಡ ಸಿದ್ದಪ್ಪ ಮರ‍್ಯಾಯಿ ಹೇಳಿದರು.

ಗ್ರಾಮದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿ ಫೋಟೊ ನೆರವೇರಿಸಿ ದಿವಂಗತ ಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಫೋಟೊ ಮೆರವಣಿಗೆಗೆ ಚಾಲನೆ ಅವರು ಮಾತನಾಡಿದರು.

‘ಕನ್ನಡಿಗರು ಭಾಷೆ ವಿಷಯದಲ್ಲಿ ಯಾವುದೇ ಹೋರಾಟಕ್ಕೂ ಹಿಂದೆ ಸರಿಯಬಾರದು. ಕನ್ನಡ ಉಳಿಸಿ–ಬೆಳೆಸಬೇಕು’ ಎಂದರು.

ADVERTISEMENT

ಬೆಮುಲ್‌ ನಿರ್ದೇಶಕ ವಿ.ಬಿ. ಈಟಿ, ‘ನಾಡು–ನುಡಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಹೇಳಿದರು.

ಗ್ರಾ.ಪಂ. ಸದಸ್ಯರಾದ ವಿನಾಯಕ ಕುಂಬಾರ, ಲಕ್ಷ್ಮಿಸಾಗರ ಈಟಿ, ಮಾರುತಿ ಹುಲ್ಲೋಳಿ, ರಮೇಶ ಕಾಳನ್ನವರ, ಶಿವಾನಂದ ಮರ‍್ಯಾಯಿ, ಡಾ.ಅರುಣ ಮರ‍್ಯಾಯಿ, ಅನಿಲ ಈಟಿ, ಶ್ರೀಧರ ಗಿಜನ್ನವರ, ಸಂಜು ಕಡಹಟ್ಟಿ, ಅನಿಲ ಕರೋಶಿ, ಮಲ್ಲಪ್ಪ‌ ಮೈತ್ರಿ, ಸಚಿನ ಮೈತ್ರಿ, ರವಿ ಗಿಜನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.