ಚಿಕ್ಕೋಡಿ: ತಾಲ್ಲೂಕಿನ ಪೊಗತ್ಯಾನಹಟ್ಟಿ ಗ್ರಾಮದಲ್ಲಿ ಶಿವಗೌಡ ಪಾಟೀಲ ಅವರಿಗೆ ಸೇರಿದ ಕಾರ್‌ಗೆ ಶಿವನಗೌಡ ಪತ್ನಿ, ಪುತ್ರ ಹಾಗೂ ಇತರೆ ಇಬ್ಬರು ಬೆಂಕಿ ಹಚ್ಚಿದ ಘಟನೆ ಗುರುವಾರ ನಡೆದಿದೆ. ಕಾರಿಗೆ ಬೆಂಕಿ ತಗುಲಿರುವುದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಿದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಪತ್ನಿ ಸಾವಿತ್ರಿ ಪಾಟೀಲ, ಪುತ್ರ ಪ್ರಜ್ವಲ ಪಾಟೀಲ, ಮಾವ ದುಂಡಪ್ಪ ರಂಗಾಪೂರೆ ಹಾಗೂ ಮಹಾಂತೇಶ ರಂಗಾಪೂರೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಶಿವಗೌಡ ಪಾಟೀಲ ನೀಡಿದ ದೂರಿನನ್ವಯ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಬಸಗೌಡ ನೇರ್ಲಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.