ADVERTISEMENT

ವನ್ಯಜೀವಿ ಸಪ್ತಾಹ: ಸೈಕ್ಲೋಥಾನ್ ಅ.2ರಿಂದ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:30 IST
Last Updated 1 ಅಕ್ಟೋಬರ್ 2020, 8:30 IST
ಸಪ್ತಾಹದ ಲೋಗೊ
ಸಪ್ತಾಹದ ಲೋಗೊ   

ಬೆಳಗಾವಿ: ಅರಣ್ಯ ಇಲಾಖೆಯಿಂದ 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿರುವ ಸೈಕ್ಲೋಥಾನ್‌ಗೆ ಜಿಲ್ಲೆಯ ಭೀಮಗಢ ವನ್ಯಜೀವಿಧಾಮದ ಹೆಬ್ಬಾಗಿಲು ಹೆಮ್ಮಡಗಾದಿಂದ ಅ.2ರಂದು ಬೆಳಿಗ್ಗೆ 7ಕ್ಕೆ ಚಾಲನೆ ದೊರೆಯಲಿದೆ.

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಹಸಿರುನಿಶಾನೆ ತೋರಲಿದ್ದಾರೆ. ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ. ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ವಿ. ಅಮರನಾಥ, ಎಸ್.ಜೆ. ಚಂದ್ರಶೇಖರ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಶಂಕರ ಕಲ್ಲೋಳಿಕರ, ಎಸಿಎಫ್ ಸಿ.ಜಿ. ಮಿರ್ಜಿ, ಎಂ.ಬಿ. ಕುಸನಾಳ, ಜಿ.ಆರ್. ಶಶಿಧರ, ಎಂ.ಕೆ. ಪಾತ್ರೋಟ ಹಾಗೂ ವಲಯ ಅರಣ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.

ಚಿಕ್ಕಮಗಳೂರಿನ ಮುತ್ತೋಡಿವರೆಗೆ ಸೈಕ್ಲಿಸ್ಟ್‌ಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ. ‘ಆನೆ ಕಾರಿಡಾರ್‌ಗಳನ್ನು ರಕ್ಷಿಸಿ’ ಮತ್ತು 'ಭವಿಷ್ಯಕ್ಕಾಗಿ ರಣಹದ್ದುಗಳು' ಘೋಷ ವಾಕ್ಯಗಳೊಂದಿಗೆ ಸೈಕ್ಲೋಥಾನ್‌ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.