ADVERTISEMENT

‘ಶಿಕ್ಷಣದಿಂದ ಮಹಿಳಾ ಸ್ವಾವಲಂಬನೆ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:31 IST
Last Updated 24 ಡಿಸೆಂಬರ್ 2025, 2:31 IST
ಬೆಳಗಾವಿಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕೊರಮ ಕೊರಚ ಮಹಿಳಾ ಸಮಾಜದ ರಾಜ್ಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಅಪಾರ ಮಹಿಳೆಯರು ಪಾಲ್ಗೊಂಡಿದ್ದರು
ಬೆಳಗಾವಿಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕೊರಮ ಕೊರಚ ಮಹಿಳಾ ಸಮಾಜದ ರಾಜ್ಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಅಪಾರ ಮಹಿಳೆಯರು ಪಾಲ್ಗೊಂಡಿದ್ದರು   

ಬೆಳಗಾವಿ: ‘ಹೆಣ್ಣು ಮಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವಾರು ಮಹಿಳೆಯರ ಸಾಧನೆಗಳೇ ಸಾಕ್ಷಿಯಾಗಿವೆ’ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.

ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಕೊರಮ ಕೊರಚ ಮಹಿಳಾ ಸಮಾಜದ ರಾಜ್ಯ ಪ್ರಥಮ ಮಹಿಳಾ ಸಮಾವೇಶವನ್ನುಉದ್ಘಾಟಿಸಿ ಮಾತನಾಡಿದ ಶ್ರೀಗಳು, ‘12ನೇ ಶತಮಾನದಲ್ಲಿಯೇ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದ್ದನ್ನು ಸ್ಮರಿಸಬಹುದು. ಶಿಕ್ಷಣ ಬದಲಾದಂತೆ ಸಮಾಜ ಬದಲಾಗುತ್ತಿದೆ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ಕಲಿಯಲು ಅನುಕೂಲ ಇರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆ ತಾನು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ’ ಎಂದರು.

ಸಮಾಜದ ಮುಖಂಡ ಮಂಜುನಾಥ ಮಾತನಾಡಿ, ‘ನಮ್ಮ ಸಮಾಜದಲ್ಲಿ ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ರಾಜಕೀಯದಲ್ಲಿ ಒಂದು ಒಳ್ಳೆಯ ಸ್ಥಾನಮಾನದ ಜೊತೆಗೆ ನಿಗಮ ಮಂಡಳಿ ಸಿಗಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಚಂದ್ರಶೇಖರ ಸುಖಸಾರೆ ಮಾತನಾಡಿ, ‘ಹಿಂದುಳಿದ ಈ ಸಮಾಜಕ್ಕೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಬೇಕು’ ಎಂದರು.

ಸಮಮಾಜದ ಜಿಲ್ಲಾ ಘಟಕದ ಅಧ್ಯಕ್ಷ್ಯೆ ಯಶೋದಾ ಭಜಂತ್ರಿ, ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಕಾ ಬಿ.ಎನ್., ರಾಜ್ಯ ಸಂಚಾಲಕ ಹನುಮಂತ ಸಿಂಗನಹಳ್ಳಿ ಮಾತನಾಡಿದರು.

ಮುಖಂಡರಾದ ರಾಮ್ ಜಿ, ಯಮನೂರ ಗುಡಿಹಾಳ, ಶ್ರೀಕಾಂತ ಭಜಂತ್ರಿ, ರವೀಂದ್ರ ಭಜಂತ್ರಿ, ಗಂಗಾರಾಮ ವಾಜಂತ್ರಿ, ಪದ್ಮಾವತಿ ಸಿಂಗನಹಳ್ಳಿ, ರೇಣುಕಾ ಮಲ್ಲೂರು, ಅಂಜನಾ ಜಾಧವ, ಚೇತನಾ ಗದಗ, ರೇಣುಕಾ ಭಜಂತ್ರಿ, ಶೈಲಜಾ ತುಮಕೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.