ಬೈಲಹೊಂಗಲ: ‘ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಗಂಡು ಮಕ್ಕಳಿಗೂ ಸಭ್ಯತೆಯ ಪಾಠ ಕಲಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಷರಸ್ಥರಾಗಬೇಕಿದೆ. ಇದರಿಂದ ಸ್ವಾವಲಬಿಗಳಾಗಿ ಬದುಕಲು ಅನುಕೂಲವಾಗುತ್ತದೆ’ ಎಂದರು.
ನ್ಯಾಯವಾದಿಗಳಾದ ಸೀಮಾ ಮಾಲದಾರ, ಲಕ್ಷ್ಮೀ ಭಾವಿಹಾಳ ಮಾತನಾಡಿ, ಮಹಿಳೆಯರಿಗೆ ಮಗುವಿನಿಂದ ವಯಸ್ಸು ಆಗುವ ತನಕವು ಕಾನೂನಿನ ಅಡಿಯಲ್ಲಿ ಇರುವ ಹಕ್ಕುಗಳ ಕುರಿತು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.