ಹುಕ್ಕೇರಿ: ತಾಲ್ಲೂಕಿನ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಕಾಮಗಾರಿ ವಿಭಾಗದ ಸಿವಿಲ್ ಕೆಲಸಗಳಾದ ಮಿಲ್ ಮತ್ತು ಬೈಲಿಂಗ್ ಹೌಸ್‌ಗಳಲ್ಲಿ ಚರಂಡಿ ಮತ್ತು ತ್ರೀಮಿಕ್ಸ್ ಫ್ಲೋರಿಂಗ್ ಮಾಡುವ ಕೆಲಸಗಳ ಭೂಮಿಪೂಜೆಗೆ ಮಲ್ಲಿಕಾರ್ಜುನ ಬಾಬಾಗೌಡ ಪಾಟೀಲ (ಹಿರಾ ಶುಗರ್ಸ್ ಸಂಸ್ಥಾಪಕ ಅಧ್ಯಕ್ಷ ಅಪ್ಪಣಗೌಡ ಪಾಟೀಲ ಅವರ ಮೊಮ್ಮಗ) ಚಾಲನೆ ನೀಡಿದರು.
ಷೇರು ವರ್ಗಾವಣೆಗೆ ಹಣ ಇಲ್ಲ?: ‘ನಮ್ಮ ಕಾರ್ಖಾನೆಯ ಸದಸ್ಯರ ಷೇರು ವರ್ಗಾವಣೆ ಸಂದರ್ಭದಲ್ಲಿ ಠೇವು ಹಣ ₹ 5,000 ತುಂಬಿಸಿಕೊಂಡು ಷೇರು ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಸದಸ್ಯರ ಠೇವು ಹಣ ₹ 5,000ವನ್ನು ರದ್ದು ಮಾಡಿ ಷೇರು ವರ್ಗಾವಣೆಗೆ ಅರ್ಜಿ ತಗೆದುಕೊಳ್ಳಲು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವೈಸ್ ಚೇರಮನ್ ಅಶೋಕ ಪಟ್ಟಣಶೆಟ್ಟಿ ತಿಳಿಸಿದರು. ಸದಸ್ಯರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ನಿರ್ದೇಶಕರಾದ ಎಂ.ಬಿ. ಪಾಟೀಲ್, ಪ್ರಭುದೇವ ಪಾಟೀಲ್, ಬಸಪ್ಪ ಮರಡಿ, ಬಾಬಾಸಾಹೇಬ ಅರಬೋಳೆ, ಸುರೇಂದ್ರ ದೊಡ್ಡಲಿಂಗನವರ, ಪವನ್ ಪಾಟೀಲ್, ಎಂಡಿ ಸಾತಪ್ಪ ಕರ್ಕಿನಾಯಕ, ಏಣಗಿಮಠ, ಅಧಿಕಾರಿಗಳು, ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.