ADVERTISEMENT

ವಸತಿ ನಿಲಯ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:35 IST
Last Updated 28 ಮಾರ್ಚ್ 2023, 5:35 IST
ಯಲ್ಲಮ್ಮನ ಗುಡ್ಡದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ
ಯಲ್ಲಮ್ಮನ ಗುಡ್ಡದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ   

ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ ಉದ್ಘಾಟನೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 28ರಂದು ಮಧ್ಯಾಹ್ನ 12ಕ್ಕೆ ಇದನ್ನು ಭಕ್ತರಿಗೆ ಸಮರ್ಪಣೆ ಮಾಡಲಿದ್ದಾರೆ.

ಸದ್ಯ ಜನರ ವಸತಿಗಾಗಿ 100 ಕೊಠಡಿಗಳಿವೆ. ಹೆಚ್ಚಿನ ಭಕ್ತರು ಗುಡ್ಡದ ವಿಶಾಲವಾದ ಪರಿಸರದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಭಕ್ತರಿಗೆ ವಸತಿ ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡ ಸರ್ಕಾರ 2013ರಲ್ಲಿ 246 ಕೊಠಡಿಗಳುಳ್ಳ ವಸತಿ ನಿಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

‘ಶಾಸಕರಾಗಿದ್ದ ಆನಂದ ಮಾಮನಿ ಪ್ರಯತ್ನದಿಂದಾಗಿ ವಸತಿ ನಿಲಯ ನಿರ್ಮಾಣವಾಗಿದೆ. ಇಲ್ಲಿ ಶುಚಿತ್ವಕ್ಕೆ ಒತ್ತು ಕೊಡುತ್ತೇವೆ’ ಎಂದು ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದ್ದಾರೆ.

‘ಈ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ ಸೌಕರ್ಯವಿದೆ. ಇದೇ ವಾರದಿಂದ ವಸತಿ ನಿಲಯವನ್ನು ಬಳಕೆಗೆ ಮುಕ್ತಗೊಳಿಸಲಿದ್ದು, ಭಕ್ತರಿಗೆ ಅನುಕೂಲವಾಗಲಿದೆ’ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.