ಯರಗಟ್ಟಿ: ಇಲ್ಲಿನ ಕಟಕೋಳ ರಸ್ತೆಯಲ್ಲಿರುವ ಹೊಲದಲ್ಲಿ ಭಾನುವಾರ ರಾತ್ರಿ ಮದುವೆ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ವಿನೋದ ಚಂದ್ರಶೇಖರ ಮಲಶೆಟ್ಟಿ (25) ಕೊಲೆಯಾದವರು. ವಿಠ್ಠಲ್ ಮುದಕಪ್ಪ ಹಾರುಗೊಪ್ಪ ಆರೋಪಿ.
ಈ ಇಬ್ಬರ ಮಧ್ಯೆ ಕೆಲವು ದಿನಗಳ ಹಿಂದೆ ಹಣಕಾಸಿನ ವ್ಯವಹಾರಕ್ಕಾಗಿ ಜಗಳ ನಡೆದಿತ್ತು. ಪರಸ್ಪರ ಮಾತನಾಡುವುದನ್ನು ಬಿಟ್ಟಿದ್ದರು. ಇಬ್ಬರ ಗೆಳೆಯ ಅಭೀಷೇಕ ವೆಂಕಪ್ಪ ಕೊಪ್ಪದ ಅವರು ತಮ್ಮ ಮದುವೆಯಾದ ಕಾರಣ ಹೊಲದಲ್ಲಿ ಪಾರ್ಟಿ ಇಟ್ಟಿದ್ದರು. ಊಟ ಮಾಡುವಾಗ ಆರೋಪಿ ವಿಠ್ಠಲನು ಮೃತ ವಿನೋದಗೆ ಚಿಕನ್ ಪೀಸ್ ಹಾಕಲು ಹೇಳಿದ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು.
ಹತ್ತಿರದಲ್ಲೇ ಇದ್ದ ಚಾಕು ತೆಗೆದುಕೊಂಡು ವಿಠ್ಠಲನು ವಿನೋದನ ಎಡಭಾಗದ ಎದೆಗೆ ಚುಚ್ಚಿದ. ತೀವ್ರ ನಿತ್ರಾಣಗೊಂಡ ವಿನೋದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ಗೆಳೆಯರು ದೂರಿನಲ್ಲಿ ತಿಳಿಸಿದ್ದಾರೆ.
ಮುರಗೋಡ ಠಾಣೆಯಲ್ಲು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.