ADVERTISEMENT

‘ಯೋಗ ಬದುಕಿನ ಆಧ್ಯಾತ್ಮಿಕ ಸೂತ್ರ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 11:18 IST
Last Updated 14 ಜುಲೈ 2020, 11:18 IST

ಬೆಳಗಾವಿ: ರೋಟರಿ ಕ್ಲಬ್ ಬೆಳಗಾವಿ ದರ್ಪಣ ವತಿಯಿಂದ ಉಚಿತ ಯೋಗ ಜಾಗೃತಿ ಶಿಬಿರವನ್ನು ಸೋಮವಾರ ಆನ್‌ಲೈನ್‌ನಲ್ಲಿ ನಡೆಸಲಾಯಿತು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಾರದಾ ಚಿನ್ನಸ್ವಾಮಿ ತರಬೇತಿ ನೀಡಿದರು. ಈ ವೇಳೆ ‘ಯೋಗದ ಜೊತೆಗೆ ಬದುಕು’ ವಿಷಯದ ಕುರಿತು ಮಾತನಾಡಿದ ಅವರು, ‘ಯೋಗವು ವಿಶ್ವವ್ಯಾಪಿ ಹಾಗೂ ಜಾತ್ಯತೀತವಾಗಿದೆ. ಬದುಕಿನ ಆಧ್ಯಾತ್ಮಿಕ ಸೂತ್ರವಾಗಿದೆ’ ಎಂದು ಹೇಳಿದರು.

‘ಆಂತರಿಕ ವಾಸ್ತವವಾಗಿರುವ ಯೋಗವು ಎಲ್ಲರನ್ನೂ ದೈಹಿಕ ಮತ್ತು ಬೌದ್ಧಿಕವಾಗಿ ಜಾಗೃತಗೊಳಿಸುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳವ ಮಾರ್ಗವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕ್ಲಬ್ ಸದಸ್ಯೆಯರು ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು.

ರೋಟರಿ ಕ್ಲಬ್ ಬೆಳಗಾವಿ ದರ್ಪಣ ಅಧ್ಯಕ್ಷೆ ಶೀತಲ್, ಕಾರ್ಯದರ್ಶಿ ಶ್ರುತಿ, ಶಿಬಿರದ ಅಧ್ಯಕ್ಷೆ ಸೌಮ್ಯಾ, ಕ್ಲಬ್ ಸದಸ್ಯೆ ಕೋಮಲಾ ಕೊಳ್ಳಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.