ADVERTISEMENT

ಆಸ್ಪತ್ರೆ ಮೇಲಿಂದ ಬಿದ್ದ ವ್ಯಕ್ತಿ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 10:06 IST
Last Updated 6 ಆಗಸ್ಟ್ 2020, 10:06 IST
ಆಸ್ಪತ್ರೆಯ ಮಹಡಿ ಮೇಲಿಂದ ಕೆಳಕ್ಕೆ ಬಿದ್ದಿರುವ ಯುವಕ
ಆಸ್ಪತ್ರೆಯ ಮಹಡಿ ಮೇಲಿಂದ ಕೆಳಕ್ಕೆ ಬಿದ್ದಿರುವ ಯುವಕ    

ಬೆಳಗಾವಿ:ಇಲ್ಲಿನ ಕಡೋಲ್ಕರ್‌ ಗಲ್ಲಿಯ ಖಾಸಗಿ ಆಸ್ಪತ್ರೆಯ ಮಹಡಿ ಮೇಲಿಂದ ಯುವಕನೊಬ್ಬ ಕೆಳಕ್ಕೆ ಬಿದ್ದ ಘಟನೆ ಬುಧವಾರ ನಡೆದಿದೆ.

ಅವರನ್ನು ತಾಲ್ಲೂಕಿನ ಹಿಂಡಲಗಾದ ರೋಹನ ಕುಪ್ಪೇಕರ (25) ಎಂದು ಗುರುತಿಸಲಾಗಿದೆ.

ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

‘ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದ ಎಂದು ಗೊತ್ತಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದಿರುವ ಖಡೇಬಜಾರ್‌ ಠಾಣೆ ಪೊಲೀಸರು,ಯುವಕ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

‘ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.