ADVERTISEMENT

ಸಸಿಗಳ ರಕ್ಷಣೆಗೆ ಯುವಕರ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 7:50 IST
Last Updated 26 ಸೆಪ್ಟೆಂಬರ್ 2020, 7:50 IST
ತೆಲಸಂಗದ ಯುವಕರು ಗಿಡಗಳ ರಕ್ಷಣೆಯಲ್ಲಿ ತೊಡಗಿರುವುದು
ತೆಲಸಂಗದ ಯುವಕರು ಗಿಡಗಳ ರಕ್ಷಣೆಯಲ್ಲಿ ತೊಡಗಿರುವುದು   

ತೆಲಸಂಗ: ಇಲ್ಲಿಂದ ಐಗಳಿಗೆ ತೆರಳುವ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಎರಡು ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳಲ್ಲಿ ಕೆಲವು, ಜೋರು ಗಾಳಿ ಮತ್ತು ಮಳೆಗೆ ನೆಲಕ್ಕುರಳಿದ್ದನ್ನು ಗಮನಿಸಿದ ಗ್ರಾಮದ ಯುವಕರು ಅವುಗಳ ರಕ್ಷಣೆಗೆ ಶ್ರಮದಾನ ಮಾಡಿದರು.

ಪಕ್ಕದಲ್ಲಿ ಗುಂಡಿ ತೆಗೆದು ಬಡಿಗೆಗೆ ಕಟ್ಟಿ ಗಿಡಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಅವುಗಳಿಗೆ ಮರು ಜೀವ ಕೊಟ್ಟಂತಾಗಿದೆ. ವಿನಾಯಕ ಗಂಗಾಧರ, ಮಹೇಶ ಮುಧೋಳ, ಸಂಗಮೇಶ ಪೂಜಾರಿ, ಧರೆಪ್ಪ ಮಾಳಿ, ಗಪೂರ ಮುಲ್ಲಾ, ಗುರುರಾಜ ಗಂಗಾಧರ ಸ್ವಯಂ ಪ್ರೇರಣೆಯಿಂದ ಈ ಕೆಲಸ ಮಾಡಿದ್ದಾರೆ.

‘ಬೆಳಿಗ್ಗೆ ಇಲ್ಲಿ ವಾಕ್‌ ಮಾಡುತ್ತೇವೆ. ಗಿಡಗಳು ವಾಲಿರುವುದನ್ನು ಗಮನಿಸಿದ್ದೆವು. ಹೀಗಾಗಿ, ಅವುಗಳ ರಕ್ಷಣೆಗೆ ಮುಂದಾದೆವು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.