ADVERTISEMENT

‘ಅಂಗವೈಕಲ್ಯ ಗುರುತಿಸಲು ತಾಯಿ ಪಾತ್ರ ಬಹುಮುಖ್ಯ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 19:44 IST
Last Updated 1 ಮಾರ್ಚ್ 2019, 19:44 IST
ವಾರ್ಷಿಕೋತ್ಸವದಲ್ಲಿ ಎಂ.ಎನ್.ನಾಗರಾಜ, ಮಕ್ಕಳೊಂದಿಗೆ ಕೇಕ್‌ ಕತ್ತರಿಸಿದರು
ವಾರ್ಷಿಕೋತ್ಸವದಲ್ಲಿ ಎಂ.ಎನ್.ನಾಗರಾಜ, ಮಕ್ಕಳೊಂದಿಗೆ ಕೇಕ್‌ ಕತ್ತರಿಸಿದರು   

ಬೆಂಗಳೂರು: ‘ಮಕ್ಕಳಲ್ಲಿರುವ ಅಂಗವೈಕಲ್ಯ ಗುರುತಿಸುವಲ್ಲಿ ತಾಯಿಯ ಪಾತ್ರ ಬಹುಮುಖ್ಯ’ ಎಂದುಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್.ನಾಗರಾಜ ಹೇಳಿದರು.

ಎಸ್.ಆರ್.ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಯಂದಿರ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಮನೆಯ ಸದಸ್ಯರಿಗೆ ಪ್ರಭಾವ ಬೀರುವಂತೆ ತಾಯಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ಶ್ರವಣ ದೋಷವುಳ್ಳ ಮಕ್ಕಳು ಪೂರ್ವ ಪ್ರಾಥಮಿಕ ತರಬೇತಿಯ ನಂತರ ಸಾಮಾನ್ಯ ಶಾಲೆಗಳಿಗೆ ಸೇರಿ, ಅಲ್ಲಿನ ಮಕ್ಕಳ ಜತೆ ಬೆರೆತು, ಬೆಳೆಯುವುದರಿಂದ ಅವರಲ್ಲಿ ಧೈರ್ಯ ಹೆಚ್ಚುತ್ತದೆ. ಸಂಸ್ಥೆಗೆ ಬರುವ ಪೋಷಕರು ಇತರ ಪೋಷಕರಿಗೂ ವಾಕ್‌ ಮತ್ತು ಶ್ರವಣ ತರಬೇತಿ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲೆ ರಶ್ಮಿ ಜೆ.ಭಟ್ ಹಾಗೂ ತಾಯಂದಿರ ತರಬೇತಿ ಕೇಂದ್ರದ ಸಂಯೋಜಕಿ ರತ್ನಾ ಬಿ.ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.