ADVERTISEMENT

ಅಕ್ಷಯಪಾತ್ರ ‘ಬಿಸಿಯೂಟ' ಡಿಜಿಟಲೀಕರಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:53 IST
Last Updated 12 ಅಕ್ಟೋಬರ್ 2017, 19:53 IST

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಸಂಪರ್ಕ ಜಾಲ ಡಿಜಿಟಲೀಕರಣಗೊಳಿಸಲು ‘ಅಕ್ಷಯ ಪಾತ್ರ ಫೌಂಡೇಷನ್’ ಜತೆಗೆ ಸಿಸ್ಕೊ ಒಡಂಬಡಿಕೆ ಮಾಡಿಕೊಂಡಿದೆ.

‘ಅಕ್ಷಯ ಪಾತ್ರ ಫೌಂಡೇಷನ್ ದೇಶದಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಕಾರ್ಯಕ್ರಮ ನಡೆಸುತ್ತಿದೆ. 12 ರಾಜ್ಯಗಳಲ್ಲಿ 13,958 ಶಾಲೆಗಳ ಸುಮಾರು 1.66 ದಶಲಕ್ಷ ಮಕ್ಕಳಿಗೆ ನೆರವಾಗುತ್ತಿದೆ. 2020ರ ವೇಳೆಗೆ ಅಕ್ಷಯ ಪಾತ್ರ ಯೋಜನೆಯನ್ನು 5 ದಶಲಕ್ಷ ಮಕ್ಕಳಿಗೆ ತಲುಪಿಸುವ ಗುರಿಗೆ ಡಿಜಿಟಲೀಕರಣ ನೆರವಾಗಲಿದೆ’ ಎಂದು ಅಕ್ಷಯ ಪಾತ್ರ ಫೌಂಡೇಷನ್‌ ಸಿಇಒ ಶ್ರೀಧರ ವೆಂಕಟ್‌ ತಿಳಿಸಿದ್ದಾರೆ.

‘ಒಪ್ಪಂದದಂತೆ ಅಕ್ಷಯ ಪಾತ್ರ ಫೌಂಡೇಷನ್‌ನ ಅಡುಗೆಮನೆ ಹಾಗೂ ಕಚೇರಿಗಳ ನಡುವೆ ಪರಸ್ಪರ ಮಾಹಿತಿ ಆಧಾರಿತ ಸಂಪರ್ಕ ಒದಗಿಸಲಾಗುವುದು. ಅಕ್ಷಯಪಾತ್ರ ಸಂಪರ್ಕ ಜಾಲ ಮೇಲ್ದರ್ಜೆಗೆ ಏರಿಸುವುದರಿಂದ ಬೆಂಗಳೂರು, ಗುರಂಗಾವ್ ಕಚೇರಿಗಳು ಹಾಗೂ ಬೆಂಗಳೂರಿನ ಎರಡು, ಲಖನೌ, ವೃಂದಾವನ, ಬಳ್ಳಾರಿ, ಗುವಾಹಟಿ, ಜಿಗಣಿಯಲ್ಲಿ ತಲಾ ಒಂದು ಅಡುಗೆ ಮನೆಗಳು ಪರಸ್ಪರ ಸಂಪರ್ಕಕ್ಕೆ ಬರಲಿವೆ’ ಎಂದು ಸಿಸ್ಕೊ ಕಾರ್ಪೊರೇಟ್‌ ವ್ಯವಹಾರಗಳ ಉಪಾಧ್ಯಕ್ಷ ಟೇ ಯೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.