ADVERTISEMENT

ಅಡುಗೆ ಅನಿಲ ಸಿಲಿಂಡರ್‌ ಸ್ಫೋಟ: 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್ ಬಳಿಯ ಕಸುವನಹಳ್ಳಿ ಕೊಳೆಗೇರಿಯಲ್ಲಿ ಬುಧವಾರ ರಾತ್ರಿ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಿಸಿ ಒಂದೇ ಕುಟುಂ ಬದ ಎಂಟು ಮಂದಿ ಗಾಯಗೊಂ ಡಿದ್ದಾರೆ.

ಕುಣಿಗಲ್‌ ಮೂಲದ ಇತ್ಸಾದಿ (46), ಅವರ ಮಗ ಸೈಯದ್‌ ಹಮೀದ್‌ (28), ಸೊಸೆಯಂದಿರಾದ ಮುಸ್ತಾನಾ ಬಾನು (25), ಫಿರ್ದೋಸಾ (24), ಮೊಮ್ಮಕ್ಕಳಾದ ಸಿಮ್ರನ್‌ (3), ಸಾಯಿರ್‌ (5), ತೋಯಿರ್‌ (3) ಮತ್ತು ಆರು ವರ್ಷದ ಹೆಣ್ಣು ಮಗು ಉಸ್ಮಾ ಗಾಯಗೊಂಡವರು. ಗಾಯಾ ಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಫಿರ್ದೋಸಾ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿ ಅಡುಗೆ ಅನಿಲದ ಸ್ಟೌ ಹೊತ್ತಿಸಿದ್ದಾರೆ. ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ನಡುಮನೆಗೂ ವ್ಯಾಪಿಸಿ ಬಳಿಕ ಸಿಲಿಂ ಡರ್‌ ಸ್ಫೋಟಿಸಿದೆ ಎಂದು ಪೊಲೀ ಸರು ಮಾಹಿತಿ ನೀಡಿದ್ದಾರೆ.

ಸ್ಫೋಟದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಸ್ಫೋಟದ ಸದ್ದು ಕೇಳಿದ ನೆರೆಹೊರೆಯವರು ಠಾಣೆಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿ ಸಲಾಯಿತು. ಘಟನೆಯಲ್ಲಿ ಫಿರ್ದೋಸಾ ಮತ್ತು ಇತ್ಸಾದಿ ಅವರಿಗೆ ಶೇ 40ರಷ್ಟು ಸುಟ್ಟಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.