ADVERTISEMENT

‘ಅಡ್ವಾಣಿ ಸ್ಥಿತಿಯೇ ಚಂದ್ರೇಗೌಡರಿಗೂ ಆಗಿದೆ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಡಿ.ಬಿ. ಚಂದ್ರೇಗೌಡ ಮತ್ತು ಅವರ ಪತ್ನಿ ಪೂರ್ಣಮ್ಮ ಅವರಿಗೆ ಕೆ.ಆರ್.ರಮೇಶ್ ಕುಮಾರ್ ಸನ್ಮಾನಿಸಿದರು. ಸಂಘದ ಉಪಾಧ್ಯಕ್ಷ ಪುರುಷೋತ್ತಮ ಗೌಡ, ಗುರುದೇವ ಪ್ರಸಾದ್, ಅಧ್ಯಕ್ಷ ಕೆ.ವಿ.ಆರ್. ಟ್ಯಾಗೊರ್ ಇದ್ದರು -ಪ್ರಜಾವಾಣಿ ಚಿತ್ರ
ಡಿ.ಬಿ. ಚಂದ್ರೇಗೌಡ ಮತ್ತು ಅವರ ಪತ್ನಿ ಪೂರ್ಣಮ್ಮ ಅವರಿಗೆ ಕೆ.ಆರ್.ರಮೇಶ್ ಕುಮಾರ್ ಸನ್ಮಾನಿಸಿದರು. ಸಂಘದ ಉಪಾಧ್ಯಕ್ಷ ಪುರುಷೋತ್ತಮ ಗೌಡ, ಗುರುದೇವ ಪ್ರಸಾದ್, ಅಧ್ಯಕ್ಷ ಕೆ.ವಿ.ಆರ್. ಟ್ಯಾಗೊರ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಡಿ.ಬಿ.ಚಂದ್ರೇಗೌಡ ಅವರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿಲ್ಲ. ಎಲ್.ಕೆ.ಅಡ್ವಾಣಿ ಅವರಿಗೆ ಆದ ಸ್ಥಿತಿಯೇ ಇವರಿಗೂ ಆಯಿತು’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಸಹ್ಯಾದ್ರಿ ಸಂಘ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸಹ್ಯಾದ್ರಿ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಡಿ.ಬಿ.ಚಂದ್ರೇಗೌಡರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.

‘ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಪ್ರಾರಂಭಿಸಿ, ಇಲ್ಲಿಯವರೆಗೆ ಡಿ.ಬಿ. ಚಂದ್ರೇಗೌಡ ಅವರು ನಾಲ್ಕು ಸದನಗಳನ್ನು ಪ್ರತಿನಿಧಿಸಿದ್ದಾರೆ. ದೇವರಾಜ ಅರಸು ಅವರ ನಂತರ ಇವರೇ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಒಮ್ಮೆಗೆ ಕೆಳಕ್ಕೆ ಕುಸಿದರು’ ಎಂದು ನೆನಪಿಸಿಕೊಂಡರು.

ADVERTISEMENT

‘ಹಿಂದೆ ರಾಜಕಾರಣದಲ್ಲಿ ಪ್ರೀತಿ, ಸ್ನೇಹ ಸಂಬಂಧಗಳು ನೆಲೆಸಿದ್ದವು. ಜತೆಗೆ ಓದು, ಚರ್ಚೆಗಳು ನಡೆಯುತ್ತಿದ್ದವು. ಜನಸೇವೆ ಮಾಡುವುದನ್ನು ತಿಳಿಸಿಕೊಡುತ್ತಿದ್ದರು. ಆದರೆ, ಇಂದಿನ ರಾಜಕಾರಣದಲ್ಲಿ ಅವುಗಳಿಗೆ ಸ್ಥಾನವೇ ಇಲ್ಲ. ಹಣ, ಅಂತಸ್ತು ಸಂಪಾದಿಸುವುದರಲ್ಲೇ ಎಲ್ಲರೂ ಮಗ್ನರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.