ADVERTISEMENT

ಅಧ್ಯಕ್ಷೆಯಾಗಿ ಗುಲಾಬ್‌ ಜಾನ್‌

ಹೊಸಕೋಟೆ ಪುರಸಭೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:31 IST
Last Updated 13 ಮಾರ್ಚ್ 2014, 19:31 IST

ಹೊಸಕೋಟೆ: ಇಲ್ಲಿನ ಪುರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ  ಗುಲಾಬ್ ಜಾನ್ ಹಾಗೂ ಉಪಾಧ್ಯಕ್ಷ­ರಾಗಿ ಗಿರಿಜಮ್ಮ ಅವರು ಗುರುವಾರ ಅವಿರೋಧ­ವಾಗಿ ಅಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಗುಲಾಬ್ ಜಾನ್ ಅವರು 17ನೇ ಹಾಗು ಗಿರಿಜಮ್ಮ ಅವರು 13 ನೇ ವಾರ್ಡ್ ಪ್ರತಿನಿಧಿಸಿ­ದ್ದಾರೆ. ತಹಶೀಲ್ದಾರ್ ಕುಮಾರಸ್ವಾಮಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುರಸಭೆಯಲ್ಲಿ ಕಾಂಗ್ರೆಸ್ ನ 12 ಹಾಗು ಬಿಜೆಪಿಯ 11 ಸದಸ್ಯರಿದ್ದಾರೆ. ನೂತನ ಅಧ್ಯಕ್ಷರನ್ನು ಶಾಸಕ ಎನ್.ನಾಗರಾಜು ಅವರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.