ADVERTISEMENT

ಅನುಮತಿ ಇಲ್ಲದೆ ರಜೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:35 IST
Last Updated 12 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ಬಿಬಿಎಂಪಿ ದಾಸರಹಳ್ಳಿ ವಲಯ ಕಚೇರಿಗೆ ಸೋಮವಾರ ಭೇಟಿ ನೀಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಸದಸ್ಯರು, ವಲಯದ ಜಂಟಿ ಆಯುಕ್ತರು ಅನುಮತಿ ಪಡೆಯದೇ ರಜೆ ಪಡೆದಿರು ವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

`ದಾಸರಹಳ್ಳಿ ವಲಯದಲ್ಲಿ ಸೋಮ ವಾರ ಸಭೆ ನಡೆಸುವುದಾಗಿ ಸೆಪ್ಟೆಂಬರ್ 8ರಂದೇ ತಿಳಿವಳಿಕೆ ಪತ್ರವನ್ನು ಜಂಟಿ ಆಯುಕ್ತರ ಕಚೇರಿಗೆ ಕಳುಹಿಸಲಾಗಿತ್ತು. ಹಾಗಿದ್ದರೂ ಸೆ. 12ಕ್ಕೆ ಯಾತ್ರೆಗೆ ಹೋಗುವುದಾಗಿ ಹೇಳಿ ಜಂಟಿ ಆಯುಕ್ತ ರಾಧಾಕೃಷ್ಣ ಅವರು ರಜೆ ಅರ್ಜಿಯನ್ನು ಹಿರಿಯ ಅಧಿಕಾರಿಗೆ ಸಲ್ಲಿಸಿದ್ದಾರೆ. ಆದರೆ ರಜೆ ಮಂಜೂರಾಗದಿದ್ದರೂ ರಜೆ ಪಡೆದಿರುವುದು ಸರಿಯಲ್ಲ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ~ ಎಂದು ಸಮಿತಿ ಅಧ್ಯಕ್ಷ ಎಚ್.ಆರ್. ಕೃಷ್ಣಪ್ಪ ಹೇಳಿದರು.

`ವಲಯದ ಅರಣ್ಯ ವಿಭಾಗಕ್ಕೆ ಸೇರಿದ ಕೆಲವು ಟ್ಯಾಂಕರ್ ವಾಹನ ಗಳನ್ನು ಆರು ತಿಂಗಳಿಂದ ಬಳಸಿಲ್ಲ. ಚಾಲಕರು ಇಲ್ಲ ಎಂಬ ಕಾರಣಕ್ಕೆ ಅವುಗಳನ್ನು ಬಳಸದಿರುವದು ಖಂಡ ನೀಯ. ಈ ತೊಂದರೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ~ ಎಂದು ಅವರು ತಿಳಿಸಿದರು.

`ಉಪ ಆರೋಗ್ಯಾಧಿಕಾರಿ, ಕಲ್ಯಾಣಾ ಧಿಕಾರಿ, ತೋಟಗಾರಿಕೆ ಅಧಿಕಾರಿ, ಕಂದಾಯ ಅಧಿಕಾರಿಗಳು ಯಾವುದೇ ವಿವರಣೆ ನೀಡದೆ ಸೇವೆಗೆ ಗೈರು ಹಾಜರಾಗಿರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸ ಲಾಗಿದ್ದು, ಕ್ರಮ ಜರುಗಿಸಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.