ADVERTISEMENT

ಅನುವಾದ ಭಾವಕ್ಕೆ, ಭಾವ ಜೋಡಿಸುವ ಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 20:11 IST
Last Updated 3 ಡಿಸೆಂಬರ್ 2012, 20:11 IST

ಬೆಂಗಳೂರು: ಅಕ್ಕ ಪ್ರಕಾಶನ ಹಾಗೂ ಗಾರ್ಗಿ ಪ್ರಕಾಶನ ಸಹಯೋಗದಲ್ಲಿ ಪ್ರೊ.ನಾರಾಯಣ ಘಟ್ಟ ಅವರ ಮೇಘದೂತ ಹಾಗೂ ಮೂರ್ಖರಿಟ್ಟ ಹೆಜ್ಜೆಯಲ್ಲಿ ಪುಸ್ತಕಗಳು ಬಿಡುಗಡೆ ಮಾಡಲಾಯಿತು.

ಸೋಮವಾರ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ.ಜಿ.ವೆಂಕಟೇಶ್ ಅವರು ಪುಸ್ತಕ ಬಿಡುಗಡೆ ಮಾತನಾಡಿದ ಅವರು, `ಕಾಳಿದಾಸನ ಮೇಘದೂತವನ್ನು ಅನುವಾದ ಮಾಡುವ ಕಷ್ಟವನ್ನು ಲೇಖಕರು ಹೊತ್ತುಕೊಂಡಿದ್ದಾರೆ ಎಂದು ಭಾವಿಸಿಕೊಂಡಿದ್ದೆ. ಆದರೆ ಅವರ ಅನುವಾದ ಮಾತಿಗೆ ಮಾತು ಜೋಡಿಸುವ ಕ್ರಿಯೆಯಲ್ಲ. ಭಾವಕ್ಕೆ ಭಾವ ಜೋಡಿಸುವ ಕ್ರಿಯೆಯನ್ನು ಅವರು ಪುಸ್ತಕದಲ್ಲಿ ಮಾಡಿದ್ದಾರೆ' ಎಂದರು.

`ಅಂತರಂಗದ ಲೋಕದಲ್ಲಿ ಶುದ್ದವಾಗಿಟ್ಟುಕೊಂಡಾಗ ಹೊರ ಲೋಕವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ' ಎಂದು ಹೇಳಿದರು.

ADVERTISEMENT

ಸಮಾರಂಭದಲ್ಲಿ ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಶ್ರೀನಿವಾಸ್ ವರಖೇಡಿ, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ.ಕೆ.ಈ.ರಾಧಾಕೃಷ್ಣ, ಕೃತಿಕಾರ ಪ್ರೊ.ನಾರಾಯಣ ಘಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.