ADVERTISEMENT

ಅಪರಾಧ ತಡೆಗೆ ಹೊಸ ಗಸ್ತು ವ್ಯವಸ್ಥೆ ಜಾರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಸಾರ್ವಜನಿಕರ ಸಹಕಾರ, ನಿರಂತರ ಎಚ್ಚರಿಕೆಯಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಸಂಶಯಾಸ್ಪದ ವ್ಯಕ್ತಿಗಳು ಮತ್ತು  ಸಂಶಯಾಸ್ಪದ ಚಟುವಟಿಕೆಗಳು ಕಂಡರೆ ತತ್‌ಕ್ಷಣ ನಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿ. ಪೊಲೀಸರು ನಿಮಿಷಗಳ ಒಳಗೆ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುತ್ತಾರೆ.

ಅಂತಹ ಹೊಸ ಗಸ್ತು ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲಾಗಿದೆ~ ಎಂದು ಸಂಪಿಗೆ ಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಾರ್ಕಾಂಡೇಯ ಅವರು ಭಾನುವಾರ ಇಲ್ಲಿ ಹೇಳಿದರು.ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಡಾವಣೆಯಲ್ಲಿ ಏರ್ಪಡಿಸಲಾಗಿದ್ದ `ಪೊಲೀಸ್ ಜನ ಸಂಪರ್ಕ ಸಭೆ~ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಬಡಾವಣೆಯಲ್ಲಿ ಅಪರಿಚಿತರು ಕಾಣಿಸಿದರೆ, ಬಾಡಿಗೆಗೆ ಹೊಸಬರು ಬಂದರೆ ಅವರ ಪೂರ್ಣ ವಿವರ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಸಲಹೆ ಮಾಡಿದರು.

 ಪಿ.ಎಸ್. ಐ. ಮುನಿರಾಜು ಹಾಗೂ ಎಚ್. ವೆಂಕಟಪ್ಪ ಅವರೂ ಸಭೆಯಲ್ಲಿ ಭಾಗವಹಿಸಿ ಧನರಾಜ್, ವೆಂಕಟಪತಿ, ಖಲೀಮುಲ್ಲಾಖಾನ್, ಪುಟ್ಟಣ್ಣ, ಸುಜಾತಾ ರೆಡ್ಡಿ, ಎಂ. ಶಂಕರ್, ಪುಟ್ಟಣ್ಣ, ಪುಷ್ಪರಾಜ ಶೆಟ್ಟಿ, ಶ್ರೀರಾಜ್, ನರಸಿಂಹಯ್ಯ ಮತ್ತಿತರರ ಪ್ರಶ್ನೆಗಳಿಗೆ ಉತ್ತರಿಸಿ, ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶಾಂತಾರಾಂ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ‌್ಯದರ್ಶಿ ನೆತ್ರಕೆರೆ ಉದಯಶಂಕರ ಭಟ್ ಕಾರ‌್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.