ADVERTISEMENT

ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 20:00 IST
Last Updated 18 ಡಿಸೆಂಬರ್ 2013, 20:00 IST

ಬೆಂಗಳೂರು: ನಿರುದ್ಯೋಗಿ ಯುವಕ–ಯುವತಿಯರಿಗೆ ಬಿಎಚ್‌ಇಎಲ್‌ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವು­ದಾಗಿ ಹಣ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿ­ಕೊಂಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ಚಾಮಯ್ಯ (55), ತುಮಕೂರಿನ ಎಸ್‌ಐಟಿ ಬಡಾವಣೆ ನಿವಾಸಿ ಸಂತೋಷ್‌ ಸಿಂಗ್‌ (29) ಮತ್ತು ಶ್ಯಾಂ ಸುಂದರ್‌ (25) ಎಂಬುವರನ್ನು ಬಂಧಿಸಿ ಎರಡು ಲಕ್ಷ ನಗದು, ಬಿಎಚ್‌ಇಎಲ್‌ನ ನಕಲಿ ಗುರುತಿನ ಚೀಟಿಗಳು, ಲೆಟರ್‌ ಹೆಡ್‌ಗಳು ಹಾಗೂ ನಕಲಿ ಸೀಲು­ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಪ್ರಕರಣದ ಪ್ರಮುಖ ಆರೋಪಿ ಎಚ್‌.ಎಸ್‌.ನವೀನ್‌ (32) ಎಂಬಾತ­ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆ.12ರಂದು ನೆಲಗೆದರಹಳ್ಳಿಯ ಎಚ್‌ಎಂಟಿ ಲೇಔಟ್‌ನಲ್ಲಿ ಹರ್ಷ ಎಂಬುವರನ್ನು ಭೇಟಿಯಾದ ಆರೋಪಿ ನವೀನ್‌, ತನ್ನನ್ನು ಬಿಎಚ್‌ಇಎಲ್‌ನ ಸಹಾಯಕ ಎಂಜಿನಿಯರ್‌ ಎಂದು ಪರಿಚಯಿಸಿಕೊಂಡಿದ್ದ. ಸಂಸ್ಥೆಯಲ್ಲಿ ತನಗೆ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಕಿರಿಯ ಎಂಜಿನಿಯರ್‌ ಹುದ್ದೆಯನ್ನು ಕೊಡಿಸುವುದಾಗಿ ₨ 3 ಲಕ್ಷ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.