ADVERTISEMENT

ಇಂದಿನಿಂದ ಮೆಟ್ರೊ ಅಂತಿಮ ಹಂತದ ಪರೀಕ್ಷಾರ್ಥ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:35 IST
Last Updated 12 ಜೂನ್ 2011, 19:35 IST

ಬೆಂಗಳೂರು: ಸುರಕ್ಷತಾ ಪ್ರಮಾಣಕ್ಕಾಗಿ ನಡೆಸಲು ಉದ್ದೇಶಿಸಲಾದ ಮೆಟ್ರೊ ರೈಲಿನ ಅಂತಿಮ ಹಂತದ ಪರೀಕ್ಷಾರ್ಥ ಸಂಚಾರ ಪೂರ್ಣಪ್ರಮಾಣದಲ್ಲಿ ಸೋಮವಾರ ಆರಂಭವಾಗಲಿದೆ. ಇದೇ 23ರವರೆಗೆ ಅಧಿಕಾರಿಗಳು ವಿವಿಧ ಪರೀಕ್ಷೆಗಳನ್ನು ನಡೆಸಲಿದ್ದಾರೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಪರೀಕ್ಷೆಗಳು ಪೂರ್ಣಗೊಂಡ ನಂತರ ಸಂಶೋಧನಾ ವಿನ್ಯಾಸ ಮತ್ತು ಮಾನಕ ಸಂಸ್ಥೆಯಿಂದ (ಆರ್‌ಡಿಎಸ್‌ಒ) ವೇಗ ಪ್ರಮಾಣಪತ್ರ ದೊರೆಯಲಿದೆ. ನಂತರ ರೈಲ್ವೆ ಸುರಕ್ಷಾ ಆಯೋಗಕ್ಕೆ ಸುರಕ್ಷತಾ ಪ್ರಮಾಣ ಪತ್ರಕ್ಕಾಗಿ ಮೆಟ್ರೊ ಅಧಿಕಾರಿಗಳು ಮನವಿ ಸಲ್ಲಿಸಲಿದ್ದಾರೆ. ಆ ನಂತರವಷ್ಟೇ ಮೆಟ್ರೊ ರೈಲು ಪ್ರಯಾ ಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಜೂನ್ 6ರಂದು ನಗರಕ್ಕೆ ಆಗಮಿಸಿರುವ ಲಖನೌದ ಆರ್‌ಡಿಎಸ್‌ಒ ಅಧಿಕಾರಿಗಳು ಪ್ರಸ್ತುತ ಪರೀಕ್ಷಾ ಉಪಕರಣಗಳನ್ನು ಅಳವಡಿಸುವಲ್ಲಿ ನಿರತರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.