ADVERTISEMENT

ಇನ್ನರ್‌ವ್ಹೀಲ್‌ ಕ್ಲಬ್‌ ಅಧ್ಯಕ್ಷೆಯ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:18 IST
Last Updated 10 ಜುಲೈ 2017, 19:18 IST
ಸ್ವಪ್ನಾ ಮಂಕಣಿ ಅವರನ್ನು ನಿಕಟಪೂರ್ವ ಅಧ್ಯಕ್ಷೆ ಉಷಾ ಸುಬ್ರಮಣಿಯನ್‌ (ಎಡದಿಂದ ನಾಲ್ಕನೆಯವರು) ಅವರು ಆಲಂಗಿಸಿ ಶುಭಕೋರಿದರು. ಮಾಲಿನಿ ರಮೇಶ್‌, ಪದ್ಮಿನಿ ನಾಗಚಂದ್ರ, ನಿಕಟಪೂರ್ವ ಕಾರ್ಯದರ್ಶಿ ತಸ್ನೀಮ್‌ ಜಿರುವಾಲಾ ಇದ್ದಾರೆ   –ಪ್ರಜಾವಾಣಿ ಚಿತ್ರ
ಸ್ವಪ್ನಾ ಮಂಕಣಿ ಅವರನ್ನು ನಿಕಟಪೂರ್ವ ಅಧ್ಯಕ್ಷೆ ಉಷಾ ಸುಬ್ರಮಣಿಯನ್‌ (ಎಡದಿಂದ ನಾಲ್ಕನೆಯವರು) ಅವರು ಆಲಂಗಿಸಿ ಶುಭಕೋರಿದರು. ಮಾಲಿನಿ ರಮೇಶ್‌, ಪದ್ಮಿನಿ ನಾಗಚಂದ್ರ, ನಿಕಟಪೂರ್ವ ಕಾರ್ಯದರ್ಶಿ ತಸ್ನೀಮ್‌ ಜಿರುವಾಲಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರಿನ ಇನ್ನರ್‌ವ್ಹೀಲ್‌ ಕ್ಲಬ್‌ನ 52ನೇ ಅಧ್ಯಕ್ಷೆಯಾಗಿ ಸ್ವಪ್ನಾ ಮಂಕಣಿ ಆಧಿಕಾರ ಸ್ವೀಕರಿಸಿದರು.

ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಡಿಸ್ಟ್ರಿಕ್ಟ್‌ ಚೇರ್ಮನ್‌ ಪದ್ಮಿನಿ ನಾಗಚಂದ್ರ ಅವರು ಪದಗ್ರಹಣ ಮಾಡಿದರು. ಉಷಾ ಸುಬ್ರಮಣಿಯನ್‌ ಅವರು ಅಧಿಕಾರ ಹಸ್ತಾಂತರ ಮಾಡಿದರು.

ಸ್ವಪ್ನಾ ಅವರು ಎಂಜಿನಿಯರಿಂಗ್‌ ಪದವೀಧರೆಯಾಗಿದ್ದು, 20 ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 6 ವರ್ಷಗಳ ಹಿಂದೆ ಇನ್ನರ್‌ ವ್ಹೀಲ್‌ ಕ್ಲಬ್‌ನ ಸದಸ್ಯೆಯಾಗಿದ್ದು, ಈವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.

ADVERTISEMENT

ಅಧಿಕಾರ ಸ್ವೀಕರಿಸಿ ಮಾತನಾಡಿದ ಸ್ವಪ್ನಾ, ‘ನಮ್ಮ ಕ್ಲಬ್‌ 51 ವರ್ಷಗಳನ್ನು ಪೂರ್ಣಗೊಳಿಸಿದೆ. ಶಿಕ್ಷಣ, ಪರಿಸರ, ಆರೋಗ್ಯ, ಮಕ್ಕಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ವೃತ್ತಿಪರ ಮಾರ್ಗದರ್ಶನ, ಪೋಲಿಯೊ ನಿರ್ಮೂಲನೆ, ಗ್ರಾಮಗಳ ದತ್ತು ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಂಡಿದೆ. ಈ ಕಾರ್ಯಗಳನ್ನು ಶ್ರದ್ಧೆಯಿಂದ ಮುನ್ನಡೆಸಿಕೊಂಡು ಹೋಗುತ್ತೇನೆ’ ಎಂದು ಹೇಳಿದರು.

ಪದ್ಮಿನಿ ನಾಗಚಂದ್ರ ಮಾತನಾಡಿ, ‘ಇನ್ನರ್ ವ್ಹೀಲ್ ಕ್ಲಬ್ ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿದೆ. ಜಗತ್ತಿನಾದ್ಯಂತ 1 ಲಕ್ಷ ಸದಸ್ಯೆಯರನ್ನು ಒಳಗೊಂಡಿದೆ. ಭಾರತದಲ್ಲಿ 40 ಸಾವಿರ ಸದಸ್ಯೆಯರು ಇದ್ದಾರೆ’ ಎಂದು ತಿಳಿಸಿದರು.

ಮಾಲಿನಿ ರಮೇಶ್‌ ಅವರು ಕ್ಲಬ್‌ನ ಕಾರ್ಯದರ್ಶಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.