ADVERTISEMENT

‘ಉತ್ತಮ ಶಾಪಿಂಗ್ ಅನುಭವ ನಮ್ಮ ಗುರಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:25 IST
Last Updated 20 ಅಕ್ಟೋಬರ್ 2017, 19:25 IST
ಹೊಸೂರು ರಸ್ತೆಯ ಬೊಮ್ಮನಹಳ್ಳಿಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಸುನಿಲ್‌ ಕುಮಾರ್‌ ಈಚೆಗೆ ಪೈ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ನೂತನ ಮಳಿಗೆ ಉದ್ಘಾಟಿಸಿದರು. ನಿವೃತ್ತ ಎಸಿಪಿ ವೆಂಕಟಸ್ವಾಮಿ, ಪೈ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ, ಹಣಕಾಸು ನಿರ್ದೇಶಕ ಮೀನಾ ರಾಜ್‌ಕುಮಾರ್‌ ಪೈ, ನಿರ್ದೇಶಕ ಗುರುಪ್ರಸಾದ್ ಪೈ ಉಪಸ್ಥಿತರಿದ್ದರು

ಬೆಂಗಳೂರು: 'ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವ ಮತ್ತು ಅತ್ಯುತ್ತಮ ಸೇವೆ ನೀಡುವುದೇ ನಮ್ಮ ಗುರಿ' ಎಂದು ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಹೇಳಿದರು.

ಹೊಸೂರು ರಸ್ತೆಯ ಬೊಮ್ಮನಹಳ್ಳಿಯಲ್ಲಿ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ನ ನೂತನ ಷೋರೂಂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಮ್ಮ ಸ್ಟೋರ್‌ಗಳು ಗ್ರಾಹಕ ಸೇವೆಯ ಅತ್ಯುತ್ತಮ ಮಾನದಂಡಗಳಿಗೆ ಬದ್ಧವಾಗಿವೆ. ನಾವು ನಮ್ಮ ವಾಗ್ದಾನ ಈಡೇರಿಸುತ್ತಿದ್ದೇವೆ ಎಂಬುದಕ್ಕೆ ದಕ್ಷಿಣ ಭಾರತದಲ್ಲಿ ನಮ್ಮ ಬೆಳವಣಿಗೆಯೇ ಸಾಕ್ಷಿ' ಎಂದು ಆತ್ಮವಿಶ್ವಾಸದಿಂದ ನುಡಿದರು.

ಒಟ್ಟು 21 ಸಾವಿರ ಚದರ ಅಡಿ ವಿಸ್ತೀರ್ಣವಿರುವ ಈ ಮಳಿಗೆಯು ಬೆಂಗಳೂರಿನಲ್ಲಿ ಪೈ ಇಂಟರ್‌ನ್ಯಾಷನಲ್ ಸಂಸ್ಥೆಯ ಅತಿದೊಡ್ಡ ಮಳಿಗೆ ಎನಿಸಿದೆ. ಇಲ್ಲಿ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಮನೆಬಳಕೆಯ ವಸ್ತುಗಳು ದೊರೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.