ADVERTISEMENT

ಉನ್ನತ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಧನ ಸಹಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 20:19 IST
Last Updated 3 ಜೂನ್ 2013, 20:19 IST
ಹೊಸಕೋಟೆಯ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸೋಮವಾರ ಶಿಕ್ಷಣ ಪ್ರೋತ್ಸಾಹ ನಿಧಿ ಯೋಜನೆ ಅಡಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಂ.ರವಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು. ವ್ಯವಸ್ಥಾಪಕ ಎಸ್.ಬಿ.ಪಾಟೀಲ್, ನಿರ್ದೇಶಕರಾದ ರಾಮಾಂಜನಿ, ಎಚ್.ಎ.ನಟರಾಜ್ ಚಿತ್ರದಲ್ಲಿದ್ದಾರೆ

ಹೊಸಕೋಟೆ: ಸಂಸ್ಥೆಯ ಸದಸ್ಯರ ಮಕ್ಕಳ ಉನ್ನತ ಅಧ್ಯಯನಕ್ಕೆ ಶಿಕ್ಷಣ ಪ್ರೋತ್ಸಾಹ ನಿಧಿಯಿಂದ ಆರ್ಥಿಕ ನೆರವು ನೀಡುತ್ತಿದೆ ಎಂದು ಪಟ್ಟಣದ ಟೌನ್ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ಎಂ.ರವಿ ಹೇಳಿದರು.

ಸೋಮವಾರ ಹಮ್ಮಿಕೊಂಡಿದ್ದ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ ತನ್ನ ವ್ಯವಹಾರದ ಜೊತೆಗೆ ಸದಸ್ಯರ ಹಿತ ಕಾಪಾಡುವಲ್ಲೂ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ.

ಸದಸ್ಯರ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕಾಗಿ 2006-07ನೇ ಸಾಲಿನಿಂದ ಇಲ್ಲಿಯವರೆಗೂ 1,265 ವಿದ್ಯಾರ್ಥಿಗಳಿಗೆರೂ 42.98ಲಕ್ಷ ಉಚಿತ ನೆರವು ನೀಡಿದೆ. ಈ ಸಾಲಿನಲ್ಲಿ ರೂ 6.96 ಲಕ್ಷವನ್ನು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ನಿರ್ದೇಶಕರಾದ ಎಚ್. ಎ.ನಟರಾಜ್, ರಾಮಾಂಜನಿ, ಮಾಲತಿ, ವ್ಯವಸ್ಥಾಪಕರಾದ ಎಸ್.ಬಿ.ಪಾಟೀಲ್, ಟಿ.ಎಲ್. ದೇವೇಂದ್ರಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.