ADVERTISEMENT

ಎಸ್‌ಐಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿನ 60 ಮಂದಿ ಎಸ್‌ಐಗಳನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಒಂದೇ ಠಾಣೆಯಲ್ಲಿ ಅಥವಾ ಒಂದೇ ಉಪ ವಿಭಾಗದ ಠಾಣೆಗಳಲ್ಲಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ, ವಾಸವಿರುವ ಮನೆಯ ವಿಳಾಸ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಯ ವಿಧಾನಸಭಾ ಕ್ಷೇತ್ರ ಒಂದೇ ಆಗಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಎಸ್‌ಐಗಳು ಸೂಚಿಸಿರುವ ಠಾಣೆಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ವರ್ಗಾವಣೆಗೊಂಡ ಎಸ್‌ಐಗಳು ಮತ್ತು ಠಾಣೆಗಳ ವಿವರ: ಧನಂಜಯ- ಜಗಜೀವನರಾಂನಗರ; ಬಿ.ರಾವುಮೂರ್ತಿ- ಎಚ್‌ಎಸ್‌ಆರ್ ಲೇಔಟ್; ಕೆಂಪೇಗೌಡ- ಆಡುಗೋಡಿ ಸಂಚಾರ; ಟಿ.ಸಂದಾನಮ್ಮ- ವಿಶ್ವೇಶ್ವರಯ್ಯ ಗೋಪುರ ಹೊರ ಠಾಣೆ; ಆಂಜನಪ್ಪ- ಇಂದಿರಾನಗರ; ಅಮೂಲ್ ಎಸ್.ಕಾಳೆ- ನಗರ ವಿಶೇಷ ಶಾಖೆ; ಎಸ್.ಜಯಾನಂದ- ಹಲಸೂರು; ಕೆಂಪಣ್ಣ- ಹೈಕೋರ್ಟ್ ಭದ್ರತೆ; ಜಿ.ಎಂ.ಶಿವರಾಮು- ಕೆ.ಆರ್.ಪುರ ಸಂಚಾರ; ಎಚ್.ಆರ್.ಶ್ರೀನಿವಾಸಯ್ಯ- ಹನುಮಂತನಗರ; ಬಿ.ಎಂ.ಶಿವಕುಮಾರ್- ಮಾಜಿ ಪ್ರಧಾನಮಂತ್ರಿಗಳ ಭದ್ರತೆ; ಎಸ್.ಮಂಜುನಾಥ- ಜಯನಗರ; ಎಸ್.ಜೆ.ಸೂರ್ಯಕಾಂತ- ಕಬ್ಬನ್‌ಪಾರ್ಕ್; ಎಚ್.ಆರ್.ನಾರಾಯಣ- ವಿಕ್ಟೋರಿಯಾ ಆಸ್ಪತ್ರೆ ಠಾಣೆ; ಎ.ಕೆ.ಗಿರೀಶ್- ಹೈಗ್ರೌಂಡ್ಸ್.

ಕೆ.ಸುರೇಶ್- ಕೋರಮಂಗಲ; ಶಿವರುದ್ರಸ್ವಾಮಿ- ಸುಬ್ರಹ್ಮಣ್ಯಪುರ; ಎಂ.ಚಂದ್ರಶೇಖರ್- ಯಲಹಂಕ ಉಪನಗರ; ಎಚ್.ಜಿ.ಮಹೇಶ- ಬಾಗಲೂರು; ಎಚ್.ಪಿ.ನಂಜುಂಡಯ್ಯ- ವೈಟ್‌ಫೀಲ್ಡ್; ಎಂ.ನಾಗರಾಜು- ಹಲಸೂರು; ಎಂ.ಎನ್.ರವಿಶಂಕರ್- ಮೈಕೊಲೇಔಟ್ ಸಂಚಾರ; ಆರ್.ಮಲ್ಲಿಕಾರ್ಜುನರೆಡ್ಡಿ- ಶಿವಾಜಿನಗರ ಸಂಚಾರ; ಗೋಪಾಲಕೃಷ್ಣ- ಯಲಹಂಕ ಸಂಚಾರ; ಬಿ.ಎಸ್.ಆನಂದ- ಏರ್‌ಪೋರ್ಟ್ ಸಂಚಾರ; ಎಚ್.ಶಿವಶರಣಪ್ಪ- ಎಲೆಕ್ಟ್ರಾನಿಕ್‌ಸಿಟಿ ಸಂಚಾರ; ಎನ್.ವೆಂಕಟಾಚಲಪತಿ- ವೈಟ್‌ಫೀಲ್ಡ್ ಸಂಚಾರ; ಬಿ.ನಾರಾಯಣಸ್ವಾಮಿ- ಮಲ್ಲೇಶ್ವರ ಸಂಚಾರ; ಗೋವಿಂದಪ್ಪ- ಇಂದಿರಾನಗರ ಸಂಚಾರ; ಕೆ.ಆರ್.ರವಿಕುಮಾರ್-ಎಲೆಕ್ಟ್ರಾನಿಕ್‌ಸಿಟಿ ಸಂಚಾರ.

ಎಂ.ಎಸ್.ಬಾಲಕೃಷ್ಣ- ಜಯನಗರ ಸಂಚಾರ; ಎಂ.ಬಿ.ಶಿವಕುಮಾರ್- ಆರ್.ಟಿ.ನಗರ ಸಂಚಾರ; ಡಿ.ಸ್ವಾಮಿ- ಸಂಚಾರ ತರಬೇತಿ ಸಂಸ್ಥೆ (ಟಿಟಿಐ); ವಿ.ಎಸ್.ಗಂಗಣ್ಣ- ಚಿಕ್ಕಪೇಟೆ ಸಂಚಾರ; ಎಚ್.ರಾಮು- ಜಯನಗರ ಸಂಚಾರ; ಪ್ರಭುರಾಜ್- ಬನಶಂಕರಿ ಸಂಚಾರ; ಎನ್.ವೆಂಕಟಯ್ಯ- ಕುಮಾರಸ್ವಾಮಿಲೇಔಟ್ ಸಂಚಾರ; ಆರ್.ಎಂ.ಪುಟ್ಟಮಾದಯ್ಯ- ಸಿಟಿ ಮಾರುಕಟ್ಟೆ ಸಂಚಾರ; ನಾಗರಾಜ- ಹಲಸೂರುಗೇಟ್ ಸಂಚಾರ; ಡಿ.ಯತಿರಾಜು- ಮಾಜಿ ಪ್ರಧಾನಮಂತ್ರಿಗಳ ಭದ್ರತೆ; ಸಿ.ಎ.ಮಂಜಪ್ಪ- ಅಶೋಕನಗರ ಸಂಚಾರ; ನಾಗರಾಜು- ಬಾಣಸವಾಡಿ ಸಂಚಾರ; ರಾಮಯ್ಯ- ದೇವನಹಳ್ಳಿ ಸಂಚಾರ; ಸಿ.ಸುಬ್ರಮಣಿ- ಸದಾಶಿವನಗರ ಸಂಚಾರ; ರಸೂಲ್‌ಖಾನ್-ಯಲಹಂಕ ಸಂಚಾರ.

ಸಿ.ರಾಮಪ್ಪ- ಚಿಕ್ಕಜಾಲ ಸಂಚಾರ; ವಿ.ರಾಜೇಂದ್ರ- ಯಲಹಂಕ ಸಂಚಾರ; ಭೈರ- ಕೊತ್ತನೂರು; ವಸೀಂ ಉಲ್ಲಾ-ಹುಳಿಮಾವು; ಸಿ.ಲಕ್ಷ್ಮಣ್- ಕಾಮಾಕ್ಷಿಪಾಳ್ಯ; ಲಕ್ಷ್ಮಮ್ಮ- ನಗರ ಅಪರಾಧ ದಾಖಲಾತಿ ವಿಭಾಗ (ಸಿಸಿಆರ್‌ಬಿ); ಡಿ.ದಾಳೇಗೌಡ- ಸಿಟಿ ಮಾರುಕಟ್ಟೆ ಸಂಚಾರ; ಡಿ.ಮುರಳೀಧರ್- ಅಶೋಕನಗರ; ಕೆ.ಆರ್.ಲೋಕೇಶ್- ಕೆ.ಆರ್.ಪುರ ಸಂಚಾರ; ವಿ.ನವೀನ್ ಸುಪೇಕರ್- ಶಿವಾಜಿನಗರ ಸಂಚಾರ; ಎಂ.ನಾಗರಾಜು- ಕಬ್ಬನ್‌ಪಾರ್ಕ್ ಸಂಚಾರ; ಎ.ಗೋಪಾಲರಾಜು- ಯಲಹಂಕ ಸಂಚಾರ; ಬಿ.ಎಂ.ಮುನಿಯಪ್ಪ- ಆಡುಗೋಡಿ ಸಂಚಾರ; ಲಕ್ಷ್ಮಿದೇವಿ- ಮಡಿವಾಳ ಮತ್ತು ಜಿ.ರಾಮೇಗೌಡ- ಸದಾಶಿವನಗರ ಸಂಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.