ADVERTISEMENT

ಒಳಚರಂಡಿ ಕೆಲಸಗಾರರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST
ಒಳಚರಂಡಿ ಕೆಲಸಗಾರರಿಗೆ ಪ್ರಶಸ್ತಿ
ಒಳಚರಂಡಿ ಕೆಲಸಗಾರರಿಗೆ ಪ್ರಶಸ್ತಿ   

ಬೆಂಗಳೂರು: ರೋಟರಿ ಕ್ಲಬ್ ಬೆಂಗಳೂರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಲಿಯ ನಾಲ್ವರು ಒಳಚರಂಡಿ ಕೆಲಸಗಾರರಿಗೆ `ಪ್ರೈಡ್ ಆಫ್ ವರ್ಕ್‌ಮನ್‌ಶಿಪ್ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.

ಒಳಚರಂಡಿ ಮೇಲ್ವಿಚಾರಕ ಪಿ.ನರಸಿಂಹಯ್ಯ, ಮೇಸ್ತ್ರಿ ಕಾಟುಮಯ್ಯ, ಒಳಚರಂಡಿ ನೌಕರರಾದ ವೇಣುಗೋಪಾಲ್ ಹಾಗೂ ಪಿಳ್ಳಪ್ಪ ಅವರಿಗೆ ಕ್ಲಬ್‌ನ ಸಹಾಯಕ ಗವರ್ನರ್ ಸುರೇಶ್ ಹರಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಹರಿ, `ಒಳಚರಂಡಿ ನೌಕರರು ನಿರ್ವಹಿಸುವ ಕೆಲಸ ಅತ್ಯಂತ ಕಷ್ಟಕರವಾದದ್ದು. ಜಲಮಂಡಲಿಯ ನೌಕರರು ಮಾಡುತ್ತಿರುವ ಕೆಲಸಕ್ಕೆ ಸಂಸ್ಥೆ ನೀಡುತ್ತಿರುವ ಪುಟ್ಟ ಕಾಣಿಕೆ ಇದು. ಇವರು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಮಂಡಲಿಗೆ ಕೀರ್ತಿ ತರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.