ADVERTISEMENT

ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 20:04 IST
Last Updated 23 ಮಾರ್ಚ್ 2018, 20:04 IST
ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಸಚಿವ ಕೃಷ್ಣಬೈರೇಗೌಡ ವ್ಯಾಯಾಮ ಮಾಡಿದರು. ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಹರಿ, ಕಾಂಗ್ರೆಸ್ ಮುಖಂಡ ವಿ.ಹರಿ ಇದ್ದಾರೆ.
ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಸಚಿವ ಕೃಷ್ಣಬೈರೇಗೌಡ ವ್ಯಾಯಾಮ ಮಾಡಿದರು. ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಹರಿ, ಕಾಂಗ್ರೆಸ್ ಮುಖಂಡ ವಿ.ಹರಿ ಇದ್ದಾರೆ.   

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರ ಬಿಇಎಲ್ ಬಡಾವಣೆಯಲ್ಲಿ ಬಿಡಿಎ ಹಾಗೂ ಬಿಬಿಎಂಪಿ ವತಿಯಿಂದ ₹8ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು.

ಕ್ರೀಡಾಂಗಣದಲ್ಲಿ 8 ಬ್ಯಾಡ್ಮಿಂಟನ್ ಕೋರ್ಟ್‌ಗಳು ಮತ್ತು ಶೆಟಲ್ ಕೋರ್ಟ್‌ಗಳು, ವ್ಯಾಯಾಮ ಕೊಠಡಿ, ಯೋಗ ಕೊಠಡಿ, ಏರೋಬಿಕ್ಸ್ ಕೊಠಡಿ, ಟೇಬಲ್ ಟೆನ್ನಿಸ್, ಕೇರಂ, ಚೆಸ್ ಹಾಗೂ ನಿರ್ವಹಣೆ ಕೊಠಡಿಗಳು ಇವೆ. ಅಲ್ಲದೆ ಸಂಗೀತ ಮತ್ತು ಶಾಸ್ತ್ರೀಯನೃತ್ಯ ಅಭ್ಯಾಸ ಹಾಗೂ ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಕ್ಷೇಮಾಭಿವೃದ್ಧಿ ಸಂಘದವರು ಸಭೆ, ಸಮಾರಂಭಗಳನ್ನು ಆಯೋಜಿಸಲು ವಿಶಾಲವಾದ ಸ್ಥಳಾವಕಾಶ ಕಲ್ಪಿಸಲಾಗಿದೆ.

ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘ದೀರ್ಘಕಾಲ ಆರೋಗ್ಯಕರವಾಗಿ ಬದುಕಬೇಕಾದರೆ ವ್ಯಾಯಾಮ, ಯೋಗ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಾದುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಕೆಬಿಎ ಕ್ರೀಡಾಂಗಣ ಹೊರತುಪಡಿಸಿ ದರೆ ಇದು ಸುಸಜ್ಜಿತ ಸೌಕರ್ಯಗಳನ್ನು ಒಳಗೊಂಡ ಎರಡನೆಯ ಅತಿದೊಡ್ಡ ಕ್ರೀಡಾಂಗಣವಾಗಿದೆ’ ಎಂದರು. 
ಕ್ರೀಡಾಂಗಣದ ಪಕ್ಕದಲ್ಲೇ ₹6.40 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಿಸಲಾಗುತ್ತಿದ್ದು, ಎರಡು ತಿಂಗಳೊಳಗಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.