ADVERTISEMENT

ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆಯ ಗುರಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಯಲಹಂಕ: ಉಪನಗರದಲ್ಲಿ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ನೂತನ ಶಾಖೆಯನ್ನು ಶಾಸಕ ಎಸ್.ಆರ್.ವಿಶ್ವನಾಥ್  ಉದ್ಘಾಟಿಸಿದರು.ಬಡವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನೀಡಬೇಕೆಂದು ಆಸ್ಪತ್ರೆಯ ಮುಖ್ಯಸ್ಥರಿಗೆ ಮನವಿ ಮಾಡಿದರು.

ಆಸ್ಪತ್ರೆಯ ಅಧ್ಯಕ್ಷ ಪ್ರೊ. ಅಮರ್ ಅಗರವಾಲ್, ಭಾರತದಲ್ಲಿ ಒಟ್ಟು 47 ಅಗರವಾಲ್ ಕಣ್ಣಿನ ಆಸ್ಪತ್ರೆಗಳಿದ್ದು, ಬೆಂಗಳೂರಿನಲ್ಲಿ ಇದು 6ನೇ ಶಾಖೆಯಾಗಿದೆ. ಮುಂದಿನ ಮೂರು ವರ್ಷಗಳೊಳಗೆ ರಾಜ್ಯದ ವಿವಿಧೆಡೆ ಇನ್ನೂ 15 ಶಾಖೆಗಳನ್ನು ತೆರೆಯುವ ಗುರಿ ಇದೆ. ಎಲ್ಲ ವರ್ಗದ ಜನರಿಗೂ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಒದಗಿಸುವುದು ನಮ್ಮ ಧ್ಯೇಯ ಎಂದರು.

ಬಿಬಿಎಂಪಿ ಸದಸ್ಯ ಎಂ.ಮುನಿರಾಜು, ಬಿಜೆಪಿ ಮುಖಂಡ ಡಾ. ಶಶಿಕುಮಾರ್, ಆಸ್ಪತ್ರೆಯ ನಿರ್ದೇಶಕರಾದ ಎಸ್.ರಾಜಗೋಪಾಲ್, ಡಾ. ಸುಧಾ, ವೈದ್ಯಕೀಯ ನಿರ್ದೇಶಕಿ ಡಾ. ನೀರಾ ಕಂಜಾನಿ ಮೊದಲಾದವರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.