ಬೆಂಗಳೂರು: ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರ ಬರೆದ ಅಭ್ಯರ್ಥಿಗಳಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ದೂರಿ ಬೆಂಗಳೂರಿನ ಎಂ.ಟಿ. ನಾಗರಾಜ್ ಎಂಬುವರು ಹೈಕೋ ರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ವಿ.ವಿ. ಸಹ ಕುಲಪತಿ ಟಿ.ಬಿ. ಜಯಚಂದ್ರ, ಸಿಂಡಿಕೇಟ್ ಸದಸ್ಯ ಅನೂಪ ದೇಶಪಾಂಡೆ ಮತ್ತು ವಿ.ವಿ. ಕುಲಪತಿಗೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದ್ದಾರೆ.
ನಾಗರಾಜ್ ಅವರು ಬೆಂಗಳೂರಿನ ಜಯನಗರದಲ್ಲಿರುವ ಬಿಇಎಸ್ ಕಾನೂನು ಮಹಾವಿದ್ಯಾಲಯದಲ್ಲಿ 5 ವರ್ಷ ಅವ ಧಿಯ ಕಾನೂನು ಕೋರ್ಸ್‌ನ ವಿದ್ಯಾರ್ಥಿ. ಇದು ಕಾನೂನು ವಿ.ವಿ. ಸಂಯೋಜನೆಗೆ ಒಳಪಟ್ಟಿದೆ. ಅವರು ಏಳನೆಯ ಸೆಮಿಸ್ಟ ರ್‌ನಲ್ಲಿ ಬರೆದ ಕಾರ್ಮಿಕ ಕಾನೂನು, ಅಪರಾಧ ಕಾನೂನು ಮತ್ತು ನ್ಯಾಯಶಾಸ್ತ್ರ ವಿಷಯಗಳಲ್ಲಿ ಅನುತ್ತೀ ರ್ಣರಾದರು.
ಈ ವಿಷಯಗಳ ಮಾದರಿ ಉತ್ತರ ಪತ್ರಿಕೆಯ ಕನ್ನಡ ಪ್ರತಿ ಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ನಾಗರಾಜ್ ಕೋರಿದರು. ಆದರೆ ಇದು ಕನ್ನಡದಲ್ಲಿ ಲಭ್ಯವಿಲ್ಲ ಎಂಬ ಉತ್ತರ ವಿ.ವಿ.ಯಿಂದ ಬಂತು. ಅಲ್ಲದೆ, ಇಂಗ್ಲಿಷ್‌ನಲ್ಲಿ ಉತ್ತರ ಬರೆದವರಿಗೆ ಹೆಚ್ಚಿನ ಅಂಕ, ಅದೇ ಉತ್ತರವನ್ನು ಕನ್ನ ಡದಲ್ಲಿ ಬರೆದವರಿಗೆ ಕಡಿಮೆ ನೀಡಿ ತಾರತಮ್ಯ ಎಸಗಲಾಗು ತ್ತಿದೆ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.