
ಬೆಂಗಳೂರು: ನಗರದ ಕನ್ನಳ್ಳಿ ಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದು, ಇದರಿಂದಾಗಿ ಕೆರೆ ಮಲಿನಗೊಂಡಿದೆ. ಕೆರೆಯ ಒಟ್ಟು ವಿಸ್ತೀರ್ಣ 68 ಎಕರೆ 32 ಗುಂಟೆ. 10 ವರ್ಷಗಳ ಹಿಂದೆ ಕನ್ನಳ್ಳಿ ಕೆರೆ ತುಂಬಿತ್ತು. ಆ ಬಳಿಕ ಆಸುಪಾಸಿನಲ್ಲಿ ಕಟ್ಟಡಗಳು ನಿರ್ಮಾಣವಾದವು. ಅಲ್ಲಿನ ಒಳಚರಂಡಿ ನೀರು ಕೆರೆಯನ್ನು ಸೇರುತ್ತಿದೆ. ಈಗ ನೀರು ಪ್ರಾಣಿ ಪಕ್ಷಿಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸ್ಥಳೀಯರು ದೂರಿದರು.
‘ಖಾಸಗಿ ವ್ಯಕ್ತಿಗಳು ಕೆರೆ ಪ್ರದೇಶ, ಕೆರೆಯ ಹರಿದು ಬರುತ್ತಿದ್ದ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸುತ್ತಿದ್ದು, ಕೆರೆಯ ಒಂದು ಬದಿಯ ದಡವನ್ನು ಒತ್ತುವರಿ ಮಾಡಿಕೊಂಡಿದೆ’ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿ ದೂರಿದ್ದಾರೆ.
‘ಕೆರೆಗೆ ಬ್ರಹ್ಮದೇವರ ಗುಟ್ಟೆ, ಚಿಕ್ಕಕೊಡಿಗೇಹಳ್ಳಿ, ಮಾಚೋಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕಗೊಲ್ಲರಹಟ್ಟಿ ಕಡೆಯಿಂದ ಮಳೆ ಬಂದಾಗ ನೀರು ಹರಿದು ಬರುತ್ತಿತ್ತು. ಕೆರೆಯ ಮೇಲ್ಬಾಗ ಖಾಸಗಿ ಬಡಾವಣೆಗಳು ನಿರ್ಮಾಣಗೊಂಡು, ನೀರು ಹರಿದು ಬರುತ್ತಿದ್ದ ಕಾಲುವೆ ಕಣ್ಮರೆಯಾಗಿದೆ. ಕೆರೆಯಲ್ಲಿ ಕಳೆ, ಜೊಂಡು, ಗಿಡಗಂಟಿಗಳು ಬೆಳೆದಿವೆ. ಕೆರೆಯ ದಡದಲ್ಲಿ ಕಟ್ಟಡ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ’ ಎಂದು ಅರು ‘ಈ ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಬಿಡಿಎ ಕೆರೆ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನೀಲ್ ಹೇಳಿದರು. ‘ಬಿಬಿಎಂಪಿ ವ್ಯಾಪ್ತಿಗೂ ಬರುವುದಿಲ್ಲ’ ಎಂದು ಬಿಬಿಎಂಪಿ ಕೆರೆಗಳ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರವಿ ಸ್ಪಷ್ಟಪಡಿಸಿದರು. ‘ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅವರಿಗೆ ಕೆರೆಯ ಬಗ್ಗೆ ಕಾಳಜಿ ಇಲ್ಲ’ ಎಂದು ಸ್ಥಳೀಯರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.